ಚಿತ್ರದುರ್ಗ: ಹಿರಿಯೂರು ಬಳಿ ಇಂದು ಬೆಳ್ಳಂಬೆಳಿಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತ ನಾಲ್ವರನ್ನು ಬಲಿತೆಗೆದುಕೊಂಡಿದೆ. ಟಯರ್ ಬ್ಲಾಸ್ಟ್ ಆಗಿ ಲಾರಿ ಪಲ್ಟಿಯಾಗಿದ್ದು ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಈ ಅಪಘಾತದಲ್ಲಿ 10 ಜನರಿಗೆ ಗಾಯಗೊಂಡಿದ್ದಾರೆ.
ಈರುಳ್ಳಿ ತುಂಬಿದ್ದ ಲಾರಿ ಪಲ್ಟಿಯಾಗಿದೆ. ಆ ಲಾರಿಗೆ 1 ಕಾರು 6 ಲಾರಿಗಳು ಡಿಕ್ಕಿಯಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 47ರ ಆಲೂರು ಕ್ರಾಸ್ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಹುಯಿಲಗೋಳ ಮೂಲದ ರಮೇಶ್ (30), ಪ್ರತಾಪ್ ಹಟ್ಟಿ (29), ಹನುಮಪ್ಪ ಕಳಕಪ್ಪ (30), ಗುರಪ್ಪ ಹೂಗಾರ್ (29) ಎಂದು ಗುರುತಿಸಲಾಗಿದೆ.