ಬೆಂಗಳೂರು: ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ಆರೋಪ ಕುರಿತಂತೆ ರಾಜಕೀಯ ಎದುರಾಳಿಗಳಾದ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವೆ ಕೆಲವು ದಿನಗಳ ವಾಕ್ಸಮರ ತಾರಕಕ್ಕೇರಿತ್ತು. ತಮ್ಮ ಪುತ್ರನನ್ನು ಸೋಲಿಸಿರುವ ಕಾರಣಕ್ಕಾಗಿ ಸುಮಲತಾ ವಿರುದ್ದ ಹೆಚ್ಡಿಕೆ ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾತುಗಳೂ ಹರಿದಾಡಿತ್ತು.ಸುಮಲತಾ ವಿರುದ್ದ ರಾಜಕೀಯ ನಾಯಕರು ಗುಡುಗಿದ ಸಂದರ್ಭದಲ್ಲೇ ಅವರ ಆಪ್ತ ಗುಂಪಿನಲ್ಲಿರುವ ರಾಕ್‌ಲೈನ್ ವೆಂಕಟೇಶ್ ವಿರುದ್ದವೂ ಹೆಚ್ಡಿಕೆ ಬೆಂಬಲಿಗರು ಪ್ರತಿಭಟನೆ ನಢಸಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ, ಹಿಂದೆ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಕೈಗೊಂಡಿದ್ದ ನಟ ದರ್ಶನ್ ವಿರುದ್ದ ಪತ್ರಕರ್ತ ಇಂದ್ರಜಿತ್ ಲಂಕೇಶ್ ಗಂಭೀತಲರ ಆರೋಪಗಳನ್ನು ಮಾಡಿದ್ದಾರೆ.
ಸುಮಲತಾ ವಿರುದ್ದ ರಾಜಕೀಯ ನಾಯಕರು ಗುಡುಗಿದ ಸಂದರ್ಭದಲ್ಲೇ ಅವರ ಆಪ್ತ ಗುಂಪಿನಲ್ಲಿರುವ ರಾಕ್‌ಲೈನ್ ಹಾಗೂ ದರ್ಶನ್ ವಿರುದ್ದ ಹೇಳಿಕೆಗಳು ಪ್ರತಿಧ್ವನಿಸಿದ್ದು, ಇನ್ನೊಂದೆಡೆ, ಇಂದ್ರಜಿತ್ ಹಾಗೂ ಹೆಚ್ಡಿಕೆ ಒಟ್ಟಿಗೆ ಇರುವ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸುಮಲತಾ ಜೊತೆ ಗುರುತಿಸಿಕೊಂಡಿರುವ ದರ್ಶನ್ ವಿರುದ್ದ ಇಂದ್ರಜಿತ್ ಅವರನ್ನು ಹೆಚ್ಡಿಕೆ ಅವರೇ ಛೂ ಬಿಟ್ಟಿದ್ದಾರೆ ಎಂಬ ಸನ್ನಿವೇಶ ಸೃಷ್ಟಿಸಲು ಯತ್ನ ನಡೆದಿದೆ ಎಂದು ಕುಮಾರಸ್ವಾಮಿ ಆಪ್ತರು ದೂರಿದ್ದಾರೆ.
ಈ ನಡುವೆ, ಇಂದ್ರಜಿತ್ ಮಾಡಿರುವ ಆರೋಪಗಳು ಮೈಸೂರು ಹೊಟೇಲ್ ಮೂಲಗಳಿಂದ ಸಿಕ್ಕಿರುವ ಮಾಹಿತಿಯಾಗಿದೆ ಎನ್ನಲಾಗಿದೆ. ಕುಮಾರಸ್ವಾಮಿ ಹಾಗೂ ಇಂದ್ರಜಿತ್ ಜೊತೆಗಿರುವ ಫೊಟೋ ಈ ಸಂದರ್ಭಕ್ಕೆ ಹೋಲಿಕೆಯಾಗಬಹುದೇ ಹೊರತು ಅದು ಇತ್ತೀಚಿನ ಭೇಟಿಯ ಸನ್ನಿವೇಶವಲ್ಲ ಎಂಬುದು ಗೊತ್ತಾಗಿದೆ.
ಹೆಚ್ಡಿಕೆ ಕೆಂಡಾಮಂಡಲ:
ಈ ನಡುವೆ, ಹೈವೋಲ್ಟೇಜ್ ರಾಜಕೀಯ ಸಂಘರ್ಷದ ವೇಳೆ ಈ ರೀತಿ ಫೊಟೋ ಹರಿಯಬಿಟ್ಟಿರುವವರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡಾ ಮಂಡಲರಾಗಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಯಾಕೆ ಈ ಫೋಟೋ ವೈರಲ್ ಮಾಡುತ್ತಿದ್ದಾರೋ ಹೋತ್ತಿಲ್ಲ. ನೂರಾರು ಜನ ನನ್ನ ಭೇಟಿ ಮಾಡುತ್ತಾರೆ. ನನ್ನ ಜೊತೆ ಫೋಟೋ ತೆಗೆದುಕೊಳ್ಳುತ್ತಾರೆ. ಆದರೂ ಇತ್ತೀಚಿಗೆ ನನ್ನ ಇಂದ್ರಜಿತ್ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ರಾಜಕಾರಣ ಮಾಡಿದ್ರೆ ನೇರವಾಗಿ ಮಾಡುತ್ತೆನೆ. ಯಾವುದೋ ಘಟನೆಯ ಬಗ್ಗೆ ಆ ಫೋಟೊ ಇಟ್ಟುಕೊಂಡು ನನ್ನ ಹೆಸರು ತಳುಕು ಹಾಕಿಸುವ ಕೆಲಸ ಮಾಡಬೇಡಿ ಎಂದವರು ಎದುರಾಳಿಗಳ ವಿರುದ್ದ ಗುಡುಗಿದ್ದಾರೆ.
ಹಲವಾರು ಬಾರಿ ಇಂದ್ರಜಿತ್ ನನ್ನನ್ನು ಭೇಟಿ ಮಾಡಿದ್ದಾರೆ. ಆದರೆ ಇತ್ತೀಚೆಗೆ ಭೇಟಿಯಾಗಿಲ್ಲ ಎಂದಿರುವ ಹೆಚ್ಡಿಕೆ, ಈ ಫೋಟೋವನ್ನು ಯಾರು ಯಾವ ಕಾರಣಕ್ಕೆ ಬಳಸಿಕೊಂಡು ಉಪಯೋಗ ಮಾಡಿಕೊಳ್ಳಲು ಹೊರಟಿದ್ದಾರೆ ಈ ಸತ್ಯವನ್ನು ಅವರೇ ತಿಳಿಸುವುದು ಒಳ್ಳೆಯದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

















































