ವಾಸ್ಕೋ (ಗೋವಾ): ಗೋವಾ ರಾಜ್ಯದ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಪ್ರಚಾರದಲ್ಲಿ ಕರ್ನಾಟಕದ ಹಲವು ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ ಮೂಲಕ ಗಮನಸೆಳೆದಿದ್ದಾರೆ. ಗೋವಾದ ಪ್ರಮುಖ ವಿಧಾನ ಸಭಾ ಕ್ಷೇತ್ರ ವಾಸ್ಕೋದಲ್ಲಿ ಶುಕ್ರವಾರ ಅವರು ಬಿಜೆಪಿ ಅಭ್ಯರ್ಥಿ ಕೃಷ್ಣಾ ಸಾಲ್ಕರ್ ಪರವಾಗಿ ಮತಯಾಚನೆ ಮಾಡಿದರು.
ಗೋವಾ ರಾಜ್ಯದಲ್ಲಿ ಕನ್ನಡಿಗ ಮತದಾರ ಸಂಖ್ಯೆ ಹೆಚ್ಚಿದೆ. ಕನ್ನಡಿಗರ ಮತ ಸೆಳೆಯಲು ಬಿಜೆಪಿ ರಾಜ್ಯ ಪ್ರಭಾವಿ ರಾಜಕಾರಣಿಗಳನ್ನು ಗೋವಾ ರಾಜ್ಯದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿದೆ. ಮುಖ್ಯಮಂತ್ರಿ ಹಾಗೂ ಸಚಿವರಾಗಿ ಕರ್ನಾಟದಲ್ಲಿ ಉತ್ತಮ ಕೆಲಸ ನಿರ್ವಹಿಸಿ ಸಜ್ಜನ ರಾಜಕರಾಣಿ ಎಂಬ ಹೆಸರು ಹೊಂದಿರುವ ಜಗದೀಶ್ ಶೆಟ್ಟರ್ ಕನ್ನಡಿಗರ ಮತ ಸೆಳೆಯುತ್ತಿದ್ದಾರೆ.
ಗೋವಾ ರಾಜ್ಯದ ಅಭಿವೃದ್ಧಿ, ಗೋವಾ ಕನ್ನಡಿಗರ ರಕ್ಷಣೆ ಹಾಗೂ ಸರ್ಕಾರದ ಸವಲತ್ತುಗಳನ್ನು ಒದಗಿಸುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಮುಂದೆಯೂ ಗೋವಾ ಕನ್ನಡಗಿರ ಅಭಿವೃದ್ಧಿಗೆ ಪಕ್ಷ ಬದ್ಧವಾಗಿದ್ದು, ಬಿಜಿಪಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶೆಟ್ಟರ್ ಮತದಾರರ ಮನ ಒಲಿಸಿದ್ದಾರೆ.
ಈ ಸಂದರ್ಭದಲ್ಲಿ ವಾಸ್ಕೋ ವಿಧಾನ ಸಭಾ ಕ್ಷೇತ್ರ ಬಿಜೆಪಿ ಮಂಡಳ ಅಧ್ಯಕ್ಷ ದೀಪಕ್ ನಾಯ್ಕ್, ರಾಜ್ಯ ಬಿಜೆಪಿ ಜನರಲ್ ಸೆಕರೇಟರಿ ಮಹೇಶ್ ಟೆಂಗಿನಾಕಾಯಿ ಕೂಡಾ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.