ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೆಂದ್ರ ಅವರನ್ನು ವರ್ಗಾಯಿಸಲಾಗಿದೆ. ರಾಜಕೀಯ ನಾಯಕರ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿ ಕೇಳಿಬರುತ್ತಿರುವಂತೆಯೇ ಜಿಲ್ಲಾಧಿಕಾರಿ ರಾಜೇಂದ್ರ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಡಾ.ರಾಜೇಂದ್ರ ಅವರು ದೂರದೃಷ್ಟಿ ಹೊಂದಿದ್ದ ಸಮರ್ಥ ಅಧಿಕಾರಿ. ಕೋವಿಡ್ ಸಂದರ್ಭದಲ್ಲಿನ ಅವರ ನಿಷ್ಟೂರ ನಡೆ ಬಗ್ಗೆ ಕರಾವಳಿಯ ಪ್ರಜ್ಞಾವಂತರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ರಾಜಕೀಯ ಪುಡಾರಿಗಳಿಗೆ ತಲೆಬಾಗಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ದ ಕೆಂಡ ಕಾರುತ್ತಲೇ ಇದ್ದರು.
ಈ ನಡುವೆ ರಾಜಕೀಯ ಒತ್ತಡ ಡಿಸಿ ಡಾ.ರಾಜೇಂದ್ರ ಅವರನ್ನೂ ಸುತ್ತುವರಿಯಿತೆನ್ನಲಾಗಿದೆ. ಕರಾವಳಿಯ ಜನಪ್ರತಿನಿಧಿಗಳ ಒತ್ತಡ ಸಹಿಸಲಾಗದೆ ವರ್ಗಾವಣೆಯನ್ನು ಅವರು ಬಯಸಿದ್ದರು ಎಂಬುದು ಅವರ ಆಪ್ತವಲಯದಲ್ಲಿ ಹರಿದಾಡುತ್ತಿದ್ದ ಮಾತುಗಳು. ಇದೇ ಸಂದರ್ಭದಲ್ಲಿ ರಾಜೇಂದ್ರ ಅವರನ್ನು ಸರ್ಕಾರ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನಿಯುಕ್ತಿ ಮಾಡದೆ ಡಾ| ಕುಮಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಸರ್ಕಾರದ ಈ ನಡೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಐಎಎಸ್ ಅಧುಕಾರಿಗಳ ವರ್ಗಾವಣೆ ಪಟ್ಟಿ:
ಕಪಿಲ್ ಮೋಹನ್-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ.
ಟಿ.ಕೆ. ಅನಿಲ್ ಕುಮಾರ್-ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ ಮತ್ತು ಯುಪಿಒಆರ್)
ಡಾ| ಎನ್.ವಿ. ಪ್ರಸಾದ್-ಕಾರ್ಯದರ್ಶಿ, ಕಾರ್ಮಿಕ ಇಲಾಖೆ
ಎನ್. ಜಯರಾಮ್-ಕಾರ್ಯದರ್ಶಿ, ಕಂದಾಯ ಇಲಾಖೆ
ಡಾ| ಬಗಾದಿ ಗೌತಮ್-ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಪಿ.ಐ. ಶ್ರೀವಿದ್ಯಾ-ಸಿಇಒ, ಇ-ಆಡಳಿತ ಕೇಂದ್ರ
ಡಿ.ಎಸ್. ರಮೇಶ್-ಚಾಮರಾಜನಗರ ಜಿಲ್ಲಾಧಿಕಾರಿ
ಡಾ| ಎನ್.ಎನ್. ಗೋಪಾಲಕೃಷ್ಣ- ಮಂಡ್ಯ ಜಿಲ್ಲಾಧಿಕಾರಿ
ಕೆ.ಎಂ. ಜಾನಕಿ-ಹೆಚ್ಚುವರಿ ನಿರ್ದೇಶಕಿ-ಸಕಾಲ
ಡಾ| ಕೆ.ವಿ. ರಾಜೆಂದ್ರ-ಮೈಸೂರು ಜಿಲ್ಲಾಧಿಕಾರಿ
ಎಸ್. ಅಶ್ವಥಿ-ಆಯುಕ್ತರು, ಪಶುಸಂಗೋಪನ ಇಲಾಖೆ
ಎಂ.ಪಿ. ಮುಲ್ಲೆ„ ಮುಹಿಲನ್-ಆಯುಕ್ತರು, ಕ್ರೀಡಾ ಇಲಾಖೆ.
ಪ್ರಭುಲಿಂಗ ಕವಳಿಕಟ್ಟಿ-ಉತ್ತರ ಕನ್ನಡ ಜಿಲ್ಲಾಧಿಕಾರಿ
ಎಂ.ಎಸ್. ದಿವಾಕರ- ಜಿ.ಪಂ. ಸಿಇಒ, ಚಿತ್ರದುರ್ಗ
ಜಿಆರ್‌ಜೆ ದಿವ್ಯಾ ಪ್ರಭು-ಚಿತ್ರದುರ್ಗ ಜಿಲ್ಲಾಧಿಕಾರಿ
ನಳಿನಿ ಅತುಲ್- ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ
ರಘುನಂದನ್ ಮೂರ್ತಿ- ಹಾವೇರಿ ಜಿಲ್ಲಾಧಿಕಾರಿ.
ಡಾ| ಕುಮಾರ್- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (ಹೆಚ್ಚುವರಿ ಹೊಣೆ)
ಭನ್ವರ್ ಸಿಂಗ್ ಮೀನಾ- ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ
ಪ್ರಕಾಶ್ ಜಿ.ಟಿ. ನಿಟ್ಟಾಲಿ-ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಡಾ| ಎಸ್. ಆಕಾಶ್- ಜಿ.ಪಂ. ಸಿಇಒ, ಕೊಡಗು







































































