ಬೆಡ್ ಬ್ಲಾಕಿಂಗ್ ಬಳಿಕ ಇದೀಗ ಬಿಜೆಪಿ ನಾಯಕರಿಂದಲೇ ಲಸಿಕೆ ಹಗರಣ: ಸಚಿವ ಸುಧಾಕರ್ ವಿರುದ್ದವೂ ಆರೋಪ; ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಲಸಿಕೆ ಹಗರಣ ನಡೆದಿದೆ ಎಂಬ ಸಂಗತಿಯನ್ನು ಪ್ರದೇಶ ಕಾಂಗ್ರೆಸ್ ಬಯಲಿಗೆಳೆದಿದೆ. ಈ ಹಗರರಣದಲ್ಲಿ ಬಿಜೆಪಿ ಸಂಸದರು, ಶಾಸಕರು ಭಾಗಿಯಾಗಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರಸ್ ಆಗ್ರಹಿಸಿದೆ.
ಏನಿದು ಲಸಿಕೆ ಕರ್ಮಕಾಂಡ..?
ಕೊರೋನಾ ಸಂಕಟ ಕಾಲದಲ್ಲಿ ಸೋಂಕು ಪ್ರತಿತೋಧಕ ಶಕ್ತಿ ಕಲ್ಪಿಸುವ ಲಸಿಕೆ ಅಭಿಯಾನ ಸಾಗಿದೆ. ಆದರೆ ಎಲ್ಲರಿಗೂ ಲಸಿಕೆ ಸಿಗುತ್ತಿಲ್ಲ. ಸೋಂಕಿನಿಂದ ಪಾರಾಗಲು ಜನರು ಕೋವಿಡ್ ಲಸಿಕೆಗಾಗಿ ಪರದಾಡುತ್ತಿದ್ದರೂ ಬಿಜೆಪಿಯ ಶಾಸಕರು ಸಂಸದರು ಲಸಿಕೆ ಹಗರಣ ನಡೆಸಿ ಕಮೀಷನ್ ಪಡೆದಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ.
ಈ ಕುರಿತಂತೆ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿ ನಾಯಕರ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದೆ. ರಾಜ್ಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆಯ ನಂತರ ಬಿಜೆಪಿ ನಾಯಕರಿಂದ ಈಗ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ. ಉಚಿತವಾಗಿ ನೀಡಬೇಕಿದ್ದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ, ಇದಕ್ಕೆ ಬೆಂಬಲವಾಗಿ ಆರೋಗ್ಯ ಸಚಿವರೂ ಸೇರಿ ಇಡೀ ಸರ್ಕಾರವೇ ಈ ಹಗರಣದಲ್ಲಿದೆ ಎಂದು ಆರೋಪಿಸಿದೆ.
ಬೆಡ್ ಬ್ಲಾಕಿಂಗ್ ದಂಧೆಯ ನಂತರ @BJP4Karnatakaಯಿಂದ ಈಗ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ.
ಉಚಿತವಾಗಿ ನೀಡಬೇಕಿದ್ದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಬಿಜೆಪಿ ಸಂಸದ @Tejasvi_Surya ಹಾಗೂ ಶಾಸಕ ರವಿ ಸುಬ್ರಮಣ್ಯ, ಇದಕ್ಕೆ ಬೆಂಬಲವಾಗಿ ಆರೋಗ್ಯ ಸಚಿವರೂ ಸೇರಿ ಇಡೀ ಸರ್ಕಾರವೇ ಈ ಹಗರಣದಲ್ಲಿದೆ.
— Karnataka Congress (@INCKarnataka) May 29, 2021
ಲಸಿಕೆ ಕೊಡಿ ಎಂದರೆ ಲಸಿಕೆ ಸಿಗ್ತಿಲ್ಲ, ನಾವು ನೇಣು ಹಾಕಿಕೊಳ್ಬೇಕಾ ಎನ್ನುವ ಬಿಜೆಪಿ ಉತ್ತರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ನಿಮ್ಮ ಶಾಸಕ, ಸಂಸದರು 900ರೂ ಗಳಿಗೆ ಲಸಿಕೆ ಮಾರುತ್ತಿರುವುದು ಹೇಗೆ?
ಆ ಲಸಿಕೆಗಳು ಎಲ್ಲಿಂದ ಸಿಕ್ಕವು?
ಸರ್ಕಾರಕ್ಕೆ ಲಸಿಕೆ ಸಿಗದಂತೆ ಬ್ಲಾಕ್ ಮಾಡುತ್ತಿರುವುದು ಯಾರು, ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಲಸಿಕೆ ಕೊಡಿ ಎಂದರೆ ಲಸಿಕೆ ಸಿಗ್ತಿಲ್ಲ, ನಾವು ನೇಣು ಹಾಕಿಕೊಳ್ಬೇಕಾ ಎನ್ನುವ @BJP4Karnataka ಉತ್ತರಿಸಬೇಕು.
ಖಾಸಗಿ ಆಸ್ಪತ್ರೆಗಳಲ್ಲಿ ನಿಮ್ಮ ಶಾಸಕ, ಸಂಸದರು 900ರೂ ಗಳಿಗೆ ಲಸಿಕೆ ಮಾರುತ್ತಿರುವುದು ಹೇಗೆ❓
ಆ ಲಸಿಕೆಗಳು ಎಲ್ಲಿಂದ ಸಿಕ್ಕವು❓ಸರ್ಕಾರಕ್ಕೆ ಲಸಿಕೆ ಸಿಗದಂತೆ ಬ್ಲಾಕ್ ಮಾಡುತ್ತಿರುವುದು ಯಾರು, ಏಕೆ❓#BJPvaccineScam
— Karnataka Congress (@INCKarnataka) May 29, 2021
ಬಿಬಿಎಂಪಿಯ ಉಚಿತ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಕೈ ಸೇರಿದ್ದು ಹೇಗೆ ಶಾಸಕ 700 ರೂಪಾಯಿ ಕಮಿಷನ್ ಕೊಳ್ಳೆ ಹೊಡೆಯುತ್ತಿರುವುದೇಕೆ? ಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆಯುತ್ತೇನೆ ಎಂದು ಬಂದು ತಮ್ಮದೇ ಪಕ್ಷದವರು ಸಿಕ್ಕಿಬಿಳುತ್ತಿದ್ದಂತೆಯೇ ಮಾಯವಾಗಿರುವ ತೇಜಸ್ವಿ ಸೂರ್ಯ, ಈ ಹಗರಣದ ಬಗ್ಗೆ ತುಟಿ ಬಿಚ್ಚುತಿಲ್ಲ ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಬಿಎಂಪಿಯ ಉಚಿತ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಕೈ ಸೇರಿದ್ದು ಹೇಗೆ❓
ಶಾಸಕ ₹700 ಕಮಿಷನ್ ಕೊಳ್ಳೆ ಹೊಡೆಯುತ್ತಿರುವುದೇಕೆ❓
ಹೇಳಿ @BJP4Karnatakaಬೆಡ್ ಬ್ಲಾಕಿಂಗ್ ಹಗರಣ ಬಯಲಿಗೆಳೆಯುತ್ತೇನೆ ಎಂದು ಬಂದು ತಮ್ಮದೇ ಪಕ್ಷದವರು ಸಿಕ್ಕಿಬಿಳುತ್ತಿದ್ದಂತೆಯೇ ಮಾಯವಾಗಿರುವ @Tejasvi_Surya ಈ ಹಗರಣದ ಬಗ್ಗೆ ತುಟಿ ಬಿಚ್ಚುತಿಲ್ಲ ಏಕೆ? pic.twitter.com/3AFPklP0Xq
— Karnataka Congress (@INCKarnataka) May 29, 2021
ಜನರು ಜೀವರಕ್ಷಕ ವ್ಯಾಕ್ಸಿನ್ ಸಿಗದೆ ಪರದಾಡುತ್ತಿದ್ದಾರೆ, ಉಚಿತವಾಗಿ ನೀಡಬೇಕಿದ್ದ ಲಸಿಕೆಯನ್ನು ಮಾರಾಟ ಮಾಡಿಕೊಂಡು ಜನರ ಹೆಣದ ಮೇಲೆ ಹಣ ಮಾಡುತ್ತಿರುವ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯನನ್ನು ಕೂಡಲೇ ಅವರ ಸ್ಥಾನಗಳಿಂದ ವಜಾಗೊಳಿಸಬೇಕು, ಕೂಡಲೇ ಬಂಧಿಸಿ ನಿಷ್ಪಕ್ಷಪಾತವಾದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಜನತೆ ಜೀವರಕ್ಷಕ ವ್ಯಾಕ್ಸಿನ್ ಸಿಗದೆ ಪರದಾಡುತ್ತಿದ್ದಾರೆ, ಉಚಿತವಾಗಿ ನೀಡಬೇಕಿದ್ದ ಲಸಿಕೆಯನ್ನು ಮಾರಾಟ ಮಾಡಿಕೊಂಡು ಜನರ ಹೆಣದ ಮೇಲೆ ಹಣ ಮಾಡುತ್ತಿರುವ @BJP4Karnataka ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯನನ್ನು ಕೂಡಲೇ ಅವರ ಸ್ಥಾನಗಳಿಂದ ವಜಾಗೊಳಿಸಬೇಕು, ಕೂಡಲೇ ಬಂಧಿಸಿ ನಿಷ್ಪಕ್ಷಪಾತವಾದ ನ್ಯಾಯಾಂಗ ತನಿಖೆಗೆ ವಹಿಸಬೇಕು.
— Karnataka Congress (@INCKarnataka) May 29, 2021
ರಾಜ್ಯಾದ್ಯಂತ ಲಸಿಕೆಗಳಿಗೆ ಹಾಹಾಕಾರವಿದೆ, ಬಡ ಜನರ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯನನ್ನು ಸಂಸತ್ ಸದಸ್ಯ ಸ್ಥಾನದಿಂದ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಾಜ್ಯಾದ್ಯಂತ ಲಸಿಕೆಗಳಿಗೆ ಹಾಹಾಕಾರವಿದೆ, ಬಡ ಜನರ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿರುವ ಸಂಸದ ತೇಜಸ್ವಿ ಸೂರ್ಯನನ್ನು ಸಂಸತ್ ಸದಸ್ಯ ಸ್ಥಾನದಿಂದ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಕ್ರಮ ಕೈಗೊಳ್ಳಬೇಕು.@BSYBJP @narendramodi
— Karnataka Congress (@INCKarnataka) May 29, 2021