ಬೆಂಗಳೂರು: ಕೊರೋನಾ ಸೋಂಕಿಗೊಳಗಾಗಿ ಸಾವನ್ನಪ್ಪಿದವರ ಮಕ್ಕಳಿಗೆ ರಾಜ್ಯ ಸರ್ಕಾರ ನೆರವು ಘೋಷಿಸಿದೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ವಿವಿಧ ಮಠಾಧಿಪತಿಗಳು, ಸಂಘಸಂಸ್ಥೆಗಳು ಆಸರೆ ನೀಡಲು ಮುಂದೆ ಬರುತ್ತಿರುವಂತೆಯೇ ಸರ್ಕಾರ ಕೂಡಾ ನೆರವಿಗೆ ಧಾವಿಸಿದೆ. ಇಂದು ರಾತ್ರಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಅವರು ಈ ನೆರವಿನ ನಿರ್ಧಾರವನ್ನು ಘೋಷಿಸಿದರು. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಮದುವೆ, ಶಿಕ್ಷಣಕ್ಕಾಗಿ ಸಿಎಂ ನೆರವು ಪ್ರಕಟಿಸಿದರು.
ಸಿಎಂ ಪ್ರಕಟಿಸಿದ ನೆರವಿನ ಹೈಲೈಟ್ಸ್ ಹೀಗಿದೆ:
- ಹೆತ್ತವರನ್ನು ಕಳೆದುಕೊಂಡ ಮಕ್ಜಳಿಗೆ ಸರ್ಕಾರದ ಮಾದರಿ ನೆರವು.
- ಮುಖ್ಯಮಂತ್ರಿ ಬಾಲಸಿರಿ ಯೋಜನೆ ಮೂಲಕ ಸರ್ಕಾರದಿಂದ ಅಭಯಹಸ್ತ.
- ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಮಾತ್ರ ಈ ನೆರವು.
- ಮಕ್ಕಳಿಗೆ ತಲಾ 3,500 ಸಾವಿರ ರೂಪಾಯಿ ನೆರವು
- ಅಂತಹಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಜಾರಿ.
- 10ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಟ್ಯಾಬ್ ವಿತರಣೆ.
- 21 ವರ್ಷ ಪೂರೈಸಿದ ಹೆಣ್ಣುಮಕ್ಕಳ ಇಗೆ1 ಲಕ್ಷ ರೂಪಾಯಿ ಸಹಾಯಧನ.
- ಕೋವಿಡ್‌ನಿಂದಾಗಿ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಮದುವೆ, ಶಿಕ್ಷಣಕ್ಕಾಗಿ ನೆರವು.