ಕರ್ನಾಟಕದಲ್ಲಿ ರಾಜಾ ಹುಲಿ ಒಂದೇ ಅಲ್ಲ. ಬಹಳಷ್ಟು ಹುಲಿ ಇವೆ ಎನ್ನುತ್ತಿರುವ ಬಿಜೆಪಿ ನಾಯಕ..
ಬೆಳಗಾವಿ: ಉಪಚುನಾವಣೆ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಸಮರ್ಥ ಆಡಳಿತ ನೀಡುವುದಾಗಿ ಬಿಜೆಪಿಯ ಫೈರ್ ಬ್ರಾಂಡ್ ಬಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಆಡಳಿತ ನೀಡುತ್ತೇನೆ ಎಂದರು.
ಕುದುರೆಯ ಲಕ್ಕೀ ಸೂಚನೆ..?
ಅಭಿಮಾನಿಯೊಬ್ಬರ ‘ಪಂಚಾಕ್ಷರಿ’ ಎಂಬ ಕುದರೆ ಕೊಡುಗೆಯ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ, ಕುದರೆ ರಾಜನ ಸಂಕೇತವಾಗಿದೆ. ಶುಭಸೂಚಕ ಕುದರೆ ಮೂಲಕ ನನಗೂ ಶುಭ ಸಿಕ್ಕಿದೆ ಎಂದರು. ಅಭಿಮಾನಿ ಮಾತ್ರ ಅಲ್ಲ. ಪಕ್ಷವೂ ನನಗೆ ಕುದರೆ ನೀಡಬೇಕಿದೆ ಎಂದ ಅವರು, ಪ್ರಾಮಾಣಿಕತೆಯಿಂದ ಸಮರ್ಥವಾಗಿ ನಿಭಾಯಿಸುವ ಶಕ್ತಿ ತಮಗಿದೆ ಇದೆ ಎಂದರು.
ಕರ್ನಾಟಕದಲ್ಲಿ ರಾಜಾ ಹುಲಿ ಒಂದೇ ಅಲ್ಲ. ಬಹಳಷ್ಟು ಹುಲಿ ಇವೆ ಎಂದು ಯತ್ನಾಳ್ ಹೇಳಿದರು.