ಅಯೋಧ್ಯೆ: ಶ್ರೀರಾಮನ ಜನ್ಮಸ್ಥಳ ಅಯೋಧ್ಯಾ ಮತ್ತೊಂದು ಮಹಾವೈಭವಕ್ಕೆ ಸಾಕ್ಷಿಯಾಗಲಿದೆ. ಶ್ರೀರಾಮ ಮಂದಿರ ಉದ್ಘಾಟನೆಯಾಗಿ ಚರ್ಷ ಪೂರೈಸುತ್ತಿದ್ದು ಈ ಹಿನ್ನೆಲೆಯಲ್ಲಿ ವಿವಿಧ ಕೈಂಕರ್ಯಗಳನ್ನು ನೆರವೇರಿಸಲು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಯಾರಿ ನಡೆಸಿದೆ.
ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಟೆಯಾಗಿ 2025ರ ಜ. 22ಕ್ಕೆ 1 ವರ್ಷ ಪೂರೈಸಲಿದೆ. ಈ ವಾರ್ಷಿಕೋತ್ಸವವನ್ನು ಶಾಸ್ತ್ರೋಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ, ಬಾಲರಾಮನ ಪ್ರಾಣಪ್ರತಿಷ್ಠೆಯ ವಾರ್ಷಿಕೋತ್ಸವ ಸಂಭ್ರಮವನ್ನು ಜನವರಿ 22ರ ಬದಲು ಜನವರಿ 11ರಂದೇ ಆಚರಿಸುವುದಾಗಿ ಟ್ರಸ್ಟ್ ಹೇಳಿದೆ. ಪಂಚಾಂಗ ಆಧರಿಸಿ ಹಿಂದೂ ಧಾರ್ಮಿಕ ಹಬ್ಬಗಳನ್ನೂ ಆಚರಿಸಲಾಗುತ್ತದೆ. ಅದೇ ರೀತಿ ಪಂಚಾಂಗ ಆಧರಿಸಿ ಪ್ರಾಣಪ್ರತಿಷ್ಠೆಯ ವರ್ಷಾಚರಣೆಯನ್ನು ಶುಕ್ಲ ಪಕ್ಷದ ದ್ವಾದಶಿ ದಿನದಂದು ನಡೆಸಲಾಗಿತ್ತು ಎಂದು ಪ್ರಮುಖರು ತಿಳಿಸಿದ್ದಾರೆ.