ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ರಾಜಕೀಯ ಬದುಕಿನ 8ನೇ ಬಜೆಟ್ ಮಂಡಿಸಿ ದೇಶದ ಗಮನ ಸೆಳೆದಿದ್ದಾರೆ. ಮಹಿಳಾ ದಿನದಂದು ವನಿತೆಯರ ಪರ ಬಜೆಟ್ ಮಂಡಿಸಿ ಶಹಬ್ಬಾಶಗಿರಿ ಗಿಟ್ಟಿಸಿಕೊಂಡಿದ್ದಾರೆ.
ಮಹಿಳಾ ಅಭಿವೃದ್ಧಿಗೆ ಒಟ್ಟು 37,188 ಕೋಟಿ ರೂ ಅನುದಾನವನ್ನು ಸಿಎಂ ಬಿಎಸ್‌ವೈ ಪ್ರಕಟಿಸಿದ್ದಾರೆ.
ಮಹಿಳಾ ಉದ್ಯಮಿಗಳಿಗೆ ನೆರವಾಗಲು 2 ಕೋಟಿ ರೂ.ವರೆಗೆ ಶೇ.4 ಬಡ್ಡಿದರದಲ್ಲಿ ಸಾಲ ಸೌಲಬ್ಯವನ್ನು ಅವರು ಪ್ರಕಟಿಸದ್ದಾರೆ.
ಪ್ರತಿ ತಾಲೂಕಿನ 10ರಂತೆ 2260 ಕಿರು ಉದ್ದಿಮೆ ಮೂಲಕ 25 ಸಾವಿರ ಮಹಿಳೆಯರಿಗೆ ಉತ್ತೇಜನಕಾರಿ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದೇ ವೇಳೆ, ಗರ್ಭಿಣಿ ಉದ್ಯೋಗಿಗಳಿಗೆ 6 ತಿಂಗಳ ರಜೆ ಸೌಲಬ್ಯವನ್ನು ಅವರು ಘೋಷಿಸಿದ್ದಾರೆ.