ಬೆಂಗಳೂರು: ಕೆಲವೊಮ್ಮೆ ಗೊತ್ತಿಲ್ಕದೆಯೇ ಅಚಾತುರ್ಯದ ಪ್ರಸಂಗಗಳು ನಡೆಯುತ್ತವೆ. ಉತ್ಸಾಹದ ನಡುವೆ ಎದುರಾಳಿಗಳ ಪರವಾಗಿಯೂ ಜೈಕಾರ ಮೊಳಗುತ್ತವೆ. ಅಂತಹುದೇ ಸನ್ನಿವೇಶ ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಪ್ರತಿಬಿಂಭಿಸಿದೆ.
ಬಿಜೆಪಿ ಕಾರ್ಯಕ್ರಮದಲ್ಲಿ ಕಾರ್ಯಯಕರ್ತ ಸಮೂಹವು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದ ಅಚ್ಚರಿಯ ಪ್ರಸಂಗವೊಂದು ಕನಲ ನಾಯಕರನ್ನು ತಬ್ಬಿಬ್ಬುಗೊಳಿಸಿದೆ.
ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸನ್ನಿವೇಶ ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸಿದೆ. ಈ ವೀಡಿಯೋ ಜೊತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಈಗ ಬಿಜೆಪಿಗರೇ, ಬಿಜೆಪಿ ಕಾರ್ಯಕ್ರಮಗಳಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಜೈ ಎನ್ನುತ್ತಿದ್ದಾರೆ. ಸಮೀಕ್ಷೆಗಳಷ್ಟೇ ಅಲ್ಲ, ಬಿಜೆಪಿಗರಿಗೂ ತಿಳಿದಿದೆ. ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸಲಿದೆ ಎಂದು ಹೇಳಿದೆ.
ಈಗ ಬಿಜೆಪಿಗರೇ, ಬಿಜೆಪಿ ಕಾರ್ಯಕ್ರಮಗಳಲ್ಲೇ "ಕಾಂಗ್ರೆಸ್ ಪಕ್ಷಕ್ಕೆ ಜೈ" ಎನ್ನುತ್ತಿದ್ದಾರೆ.
ಸಮೀಕ್ಷೆಗಳಷ್ಟೇ ಅಲ್ಲ, ಬಿಜೆಪಿಗರಿಗೂ ತಿಳಿದಿದೆ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸಲಿದೆ ಎಂದು!#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/YuQ2FOCXi7
— Karnataka Congress (@INCKarnataka) May 7, 2023