ಬೆಂಗಳೂರು: ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಭರ್ಜರಿಯಾಗಿ ಸಾಗಿದೆ. ಲಕ್ಷಾಂತರ ಜನರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದು ರಾಜ್ಯ ರಾಜಕಾರಣದಲ್ಲಿ ರಾಹುಲ್ ಮೇನಿಯಾ ಸೃಷ್ಟಿಯಾಗಿದೆ.
LIVE : #ಭಾರತಐಕ್ಯತಾಯಾತ್ರೆ ಶ್ರೀರಂಗಪಟ್ಟಣದ KSRTC ಬಸ್ ನಿಲ್ದಾಣದಿಂದ ಪಾಂಡವಪುರ #BharatJodoYatra https://t.co/hQwjwMDqcd
— Karnataka Congress (@INCKarnataka) October 3, 2022
ರಾಜ್ಯದಲ್ಲಿ ನಾಲ್ಕನೇ ದಿನವಾದ ಇಂದೂ ಕೂಡಾ ಕಾಂಗ್ರೆಸ್ ಸೈನ್ಯ ಈ ಯಾತ್ರೆಯಲ್ಲಿ ಭಾಗಿಯಾಗಿ ಗಮನಕೇಂದ್ರೀಕರಿಸಿದೆ. ಇದೀಗ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುವ ಮೂಲಕ ಸುದ್ದಿಗೆ ಗುದ್ದು ನೀಡಿದ್ದಾರೆ.
"ಕರ್ನಾಟಕಕ್ಕೆ ಸ್ವಾಗತ"
ಇಂದು ಮೈಸೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರು ಭರಮಾಡಿಕೊಂಡರು.
ಸೋನಿಯಾ ಗಾಂಧಿಯವರ ಆಗಮನದಿಂದ ಭಾರತ ಐಕ್ಯತಾ ಯಾತ್ರೆಗೆ ಮತ್ತಷ್ಟು ಹುರುಪು, ಶಕ್ತಿ ದೊರಕಿದಂತಾಗಿದೆ.#BharatJodoYatra pic.twitter.com/J8vD8BHh3b
— Karnataka Congress (@INCKarnataka) October 3, 2022
ಸೋನಿಯಾ ಗಾಂಧಿ ಅವರ ಆಗಮನ ತಮಗೆ ಶಕ್ತಿ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಸೋನಿಯಾ ಆಗಮನ ಬಗ್ಗೆ ಆಡಳಿತಾರೂಢ ಬಿಜೆಪಿ ವ್ಯಂಗ್ಯವಾಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ ಎಂದು ಬಿಜೆಪಿ ಹೇಳಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ‘ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಆಗಮನದಿಂದ ಜೈಲುಹಕ್ಕಿ ಡಿಕೆಶಿ ಹಾಗೂ ಭ್ರಷ್ಟರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ’ ಎಂದು ಬಣ್ಣಿಸಿದೆ. ‘ಭ್ರಷ್ಟರೆಲ್ಲ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ’ ಎಂದು ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಬಿಜೆಪಿ ಟ್ವೀಟ್ ಮೂಲಜ ಟೀಕಿಸಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ.
ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಆಗಮನದಿಂದ #ಜೈಲುಹಕ್ಕಿಡಿಕೆಶಿ ಹಾಗೂ #ಭ್ರಷ್ಟರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ.
ಭ್ರಷ್ಟರೆಲ್ಲ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ! pic.twitter.com/3xfS1GSLuH
— BJP Karnataka (@BJP4Karnataka) October 3, 2022


















































