ಆಗ ತಾನೆ ಹುಟ್ಟಿದ ಮಗುವೊಂದು ತನ್ನ ಬಾಲದಿಂದಾಗಿ ಗಮನಸೆಳೆದಿದೆ. ಕೆಲವು ದಿನಗಳ ಹಿಂದಷ್ಟೇ ಹುಟ್ಟಿದ ಮಗುವಿದೆ ಗೇಣುದ್ದದ ಬಾಲವಿದೆ. ಸುಮಾರು 12 ಸೆಂಟಿ ಮೀಟರ್ ಉದ್ದದ ಬಾಲವಿರುವ ಮಗುವೊಂದು ಬ್ರೆಜಿಲ್ನಲ್ಲಿ ಇತ್ತೀಚೆಗೆ ಜನನವಾಗಿದೆ.
ಫೋರ್ಟಲಿಝಾ ನಗರದಲ್ಲಿನ ಆಸ್ಪತ್ರೆ ಇದಕ್ಕೆ ಸಾಕ್ಷಿಯಾಗಿದೆ. ವೈದ್ಯರು ಹೇಳುವ ಪ್ರಕಾರ ಯುವತಿ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಹೆರಿಗೆಯಾಗಿದೆ. ಜನಿಸಿದ ಮಗುವಿನ ಸೊಂಟದ ಹಿಂಬದಿಯಲ್ಲಿ ಬಾಲ ಬೆಳೆದಿತ್ತು.
ವೈದ್ಯ ಲೋಕದಲ್ಲೂ ಅಚ್ಚರಿ ಎಂಬಂತಿರುವ ಈ ಮಗುವಿನ ಬಗ್ಗೆ ತಜ್ಞರು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದು ಅಪರೂಪದಲ್ಲೂ ಅಪರೂಪದ ಪ್ರಕರಣವಾಗಿದ್ದು ಮಗುವಿನಲ್ಲಿರುವುದು ಬಾಲವಲ್ಲದೆ ಬೇರೇನೂ ಅಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಹೇಳಿಕೆ ನಂತರ ಈ ಬಾಲವಿರುವ ಮಗು ಜಗತ್ತಿನ ಕೇಂದ್ರಬಿಂದುವಾಗಿದೆ. ಇದೇ ವೇಳೆ, ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಬಾಲವನ್ನು ತೆಗೆದಿದ್ದಾರೆ.