ಬೆಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮದರಸಾ ಅಥವಾ ಹಿಂದೂಯೇತರ ಧರ್ಮಗಳ ಸಂಸ್ಥೆಗಳಿಗೆ ಹಣ ಪಾವತಿಯಾಗಿತ್ತಿದ್ದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಆದರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮದರಸಾ ಅಥವಾ ಇನ್ನಿತರ ಮುಸ್ಲಿಂ ಧರ್ಮದವರಿಗೆ ಹಣ ಸಂದಾಯವಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡುತ್ತಿದ್ದರು.
ಇದೀಗ ರಾಜ್ಯ ಸರ್ಕಾರದ ನೈಜ ವೈಖರಿ ಹೇಗಿತ್ತು ಎಂಬ ಸಂಗತಿ ಬಯಲಾಗಿದೆ. ಕೆಲ ತಿಂಗಳ ಹಿಂದಿನವರೆಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮದರಸಾ ಹಾಗೂ ಇನ್ನಿತರ ಅನ್ಯ ಧರ್ಮೀಯರಿಗೆ ಹಣ ಪಾವತಿಸಲಾಗುತ್ತಿತ್ತು ಎಂಬ ಸಂಗತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬರೋಬ್ಬರಿ 757 ಹಿಂದೂಯೇತರ ಸಂಸ್ಥೆಗಳಿಗೆ 48,000 ರೂಪಾಯಿಗಳಂತೆ ಸುಮಾರು 3,63,36,000 ರೂಪಾಯಿಗಳನ್ನು ಕರ್ನಾಟಕ ಸರ್ಕಾರ ತಸ್ತಿಕ್ ಅನುದಾನ ರೂಪದಲ್ಲಿ ನೀಡುತ್ತಿತ್ತು ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಮುಜರಾಯಿ ಇಲಾಖೆ ನೀಡಿರುವ ದಾಖಲೆ ಹೇಳುತ್ತದೆ.
ಈ ಕುರಿತಂತೆ ಗಿರೀಶ್ ಭಾರಧ್ವಜ್ ಎಂಬವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಮಾಹಿತಿ ಕೇಳಿದ್ದು, ಅದರಂತೆ ಮಾಹಿತಿ ನೀಡಿರುವ ಇಲಾಖೆ ಈ ಸಂಗತಿಯತ್ತ ಬೆಳಕು ಚೆಲ್ಲಿದೆ. ಈ ಹಣ ಸಂದಾಯ ಪ್ರಕ್ರಿಯೆಯನ್ನು ಕೋಟಾ ಶ್ರೀನಿವಾಸ ಪೂಜಾರಿಯವರು ಧಾರ್ಮಿಕ ದತ್ತಿ ಇಲಾಖೆಯ ಮಂತ್ರಿಯಾದ ಸಂದರ್ಭದಲ್ಲಿ ತಡೆಹಿಡಿದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಹಣವನ್ನು ವಕ್ಫ್ ಇಲಾಖೆಯಿಂದ ಬಿಡುಗಡೆಗೊಳಿಸುವಂತೆ ಆದೇಶಿಸಲಾಗಿದೆ ಎಂದೂ ಇಲಾಖೆಯು ಮಾಹಿತಿ ಒದಗಿಸಿದೆ.
ಎಷ್ಟು ಹಣ ಸಂದಾಯದ ಪಟ್ಟಿ ಇಲ್ಲಿದೆ: