ಹಾವೇರಿ: ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2(ಎ) ಮೀಸಲಾತಿ ಕಲ್ಪಿಸಬೇಕೆಂಬ ಹೋರಾಟ ಬಿರುಸುಗೊಂಡಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಜಿಲ್ಲೆಯಲ್ಲೇ ಇಂದು ಸಮುದಾಯದ ಮುಖಂಡರು ಶಕ್ತಿ ಪ್ರದರ್ಶನ ನಡೆಸಿದರು. ಮುಖ್ಯಮಂತ್ರಿಯವರ ತವರಲ್ಲಿ ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಕಿಚ್ಚು ಹಚ್ಚಿದ ಬೆಳವಣಿಗೆಯು ರಾಜಕೀಯ ವಲಯದಲ್ಲೂ ಸಂಚಲನ ಉಂಟು ಮಾಡಿತು.
‘ನುಡಿದಂತೆ ನಡೆಯಿರಿ’;
ಸರ್ಕಾರಕ್ಕೆ ಖಾವಿ ಚಾಟಿ ಏಟು..
ಹಾವೇರಿಯಲ್ಲಿ ನಡೆದ ಈ ಹೋರಾಟದಲ್ಲಿಂದು ಪಂಚಮಸಾಲಿ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರಿಂದ ಭಾರೀ ಮಹತ್ವ ಬಂತು. ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರತಿನಿಧಿಗಳು ಭಾಗಿಯಾಗಿ ಹೋರಾಟಕ್ಕೆ ಚೈತನ್ಯ ತುಂಬಿದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ತಮ್ಮ ಸಮುದಾಯದ ಬೇಡಿಕೆ ಈಡೇರಿಕೆ ಸಂಬಂಧ ರಾಜ್ಯಸರ್ಕಾರ ನೀಡಿದ್ದ ಭರವಸೆಯ ಗಡುವು ಮುಗಿಯುತ್ತಾ ಬಂದಿದೆ ಎಂದು ನೆನಪಿಸಿದರು.
ಕಳೆದ ಬಾರಿ ನಮಗೆ ನೀವೇ ಭರವಸೆ ನೀಡಿದ್ದೀರಿ. ಇದೀಗ ನೀವೇ ಮುಖ್ಯಮಂತ್ರಿಯಾಗಿದ್ದೀರಿ ಹಾಗಾಗಿ ಸೂಕ್ತ ನಿರ್ಧಾರ ಕೈಗೊಳ್ಳುವ ಅವಕಾಶವೂ ನಿಮಗೆ ಸಿಕ್ಕಿದೆ ಎಂದು ಶ್ರೀಗಳು ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿದರು.
ನಾವು ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಶೈಕ್ಷಣಿಕ ಅನುಕೂಲತೆಗಾಗಿ ಮೀಸಲಾತಿ ಬಯಸಿದ್ದೇವೆ. ಇಡೀ ಸಮಾಜ ಆಶಯವನ್ನು ಈ ಮೀಸಲಾತಿಯಿಂದ ನಿರೀಕ್ಷಿಸುತ್ತಿದ್ದೇವೆ. ರೈತಾಪಿ ಜನರ ಹಿತಕ್ಕಾಗಿ ಮೀಸಲಾತಿಯ ಹಕ್ಕೊತ್ತಾಯ ಮಂಡಿಸಿದ್ದೇವೆ ಎಂದ ಜಯಮೃತ್ಯುಂಜಯ ಶ್ರೀಗಳು, ಒಂದು ವೇಳೆ ಸರ್ಕಾರ ನುಡಿದಂತೆ ನಡೆಯದಿದ್ದಲ್ಲಿ ಜೆ.ಹೆಚ್.ಪಾಟೇಲ್ ಜನ್ಮದಿನ, ಅಕ್ಟೋಬರ್ 1ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂದೇಶವನ್ನೂ ರವಾನಿಸಿದರು.
ಸಮಾವೇಶದಲ್ಲಿ ಭಾಗಿಯಾದ ಸಂಘಟನೆಗಳ ಮುಖಂಡರ ಪಟ್ಟಿ ಹೀಗಿದೆ:
- ಲಿಂಗಾಯತ ಗೌಡ ಮಹಾಸಭ ಅಧ್ಯಕ್ಷ ಹಾಲನಹಳ್ಳಿ ಪುಟ್ಟಸ್ವಾಮಿ,
- ಚಂಚ ಸೇನೆ ಅಧ್ಯಕ್ಷ ಬಿ.ಎಸ್ .ಪಾಟೀಲ್
- ಲಿಂಗಾಯತ ಗೌಡ ಮಹಾಸಭ ಯುವ ಘಟಕ ಅಧ್ಯಕ್ಷ ಶಭುಪಟೇಲ್ ಆರ್ ವರುಣಾ,
- ಶ್ರೀ ರೋಹಿಣಿ ಪಾಟೀಲ್, ನಾಗೇಂದ್ರ ಕಟಕೋಳ, ವೀರೇಶ ಮತ್ತಿಹಳ್ಳಿ ಶಿವಕುಮಾರ ಸಂಗೂರ, ಭಾರತಿಿ
- ಜಂಬಗಿ R. ಶಂಕರ, ರಮೇಶ ಬಳ್ಳಾರಿ, ಲಲಿತಾ ಗುಂಡೇನಹಳ್ಳಿ ದಾನೇಶ್ವರ ಕೆಂಗೊಂಡ ಮಂಜುನಾಥ ಹಾಲಪ್ಪನವರ, ಶಿವಲಿಂಗಪ್ಪ ಸಾತೇನೇಹಳ್ಳಿ ಬಸವರಾಜ ಹಾಲಪ್ಪನವರ, ಮಲ್ಲಿಕಾರ್ಜುನ ಬೇವಿನಮರದ, ಶಿವಾನಂದ ಬಾಗೂರ, ಮಲ್ಲಿಕಾರ್ಜುನ ಅಗಡಿ, ನಾಗರಾಜ ಕ್ಯಾಬಳ್ಳಿ ‘ಶಿವಯೋಗಿ ಗಡಾದ,
- ಮಂಜುನಾಥ ಕುನ್ನೂರ, ರಾಜು ಪಟ್ಟನಶೆಟ್ಟಿ ಬಸಲಿಂಗಪ್ಪಾ ನರಗುಂದ, ಮಾರುತಿ ಶಿಡ್ಲಾಪುರ, S.V. ಪಾಟಲ, ಡಾII ಬಸವರಾಜ ವಿರಾಪುರ ಸೊಮೆಶ್ವರ ಕೊತಂಬ್ರಿ
ಶಶಿಧರ ಯಲಿಗಾರ - ಹಾವೇರಿ ಸುತ್ತಮುತ್ತಲ ಜಿಲ್ಲೆಗಳ ವಿವಿಧ ಸಂಘಟನಗಳ ಪ್ರಮುಖರು ಭಾಗವಹಿಸಿದ್ದರು.