ಬೆಂಗಳೂರು: ಗಣೇಶೋತ್ಸವ ಕುರಿತಂತೆ ರಾಜ್ಯದ ಜನರ ಕುತೂಹಲಕ್ಕೆ ತೆರೆಬಿದ್ದಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹಬ್ಬ ಓಕೆ.. ಮನೋರಂಜನೆ ಯಾಕೆ..? ಎಂಬ ಪ್ರಜ್ಞಾವಂತರ ಅಭಿಪ್ರಾಯಕ್ಕೆ ಸರ್ಕಾರ ಮಣೆ ಹಾಕಿದೆ. ಐದು ದಿನಗಳಿಗೆ ಸೀಮಿತಗೊಳಿಸಿ ಗಣೇಶೋತ್ಸವಕ್ಕೆ ಸರ್ಕಾರ ಸಹಮತ ವ್ಯಕ್ತಪಡಿಸಿದೆ.
ಇದೊಂದು ಧಾರ್ಮಿಕ ಉತ್ಸವ. ಹಬ್ಬ ಆಚರಣೆ ಜೊತೆಗೆ ಉದ್ಯಮವಲಯದ ಕೊಂಡಿಯೂ ಇದೆ. ಹಾಗಾಗಿ ಯಾವುದೇ ಅಡ್ಡಿಯಾಗಬಾರದೆಂಬ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಸರಳ ಆಚರಣೆಗೆ ಸರ್ಕಾರ ಒಪ್ಪಿಗೆಸೂಚಿಸಿದೆ. ಆದರೆ ಮಾರ್ಗಸೂಚಿ ನಿಯಮ ಉಲ್ಲಂಘನೆಯಾದರೆ ಅದಕ್ಕೆ ಸಂಘಟಕರೇ ಹೊಣೆಯಾಗುತ್ತಾರೆ.
ಮೂರು ದಿನಗಳ ಕಾಲ ಮಾತ್ರ ಉತ್ಸವ ಆಚರಿಸಬೇಕು. ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಉತ್ಸವ ಆಚರಣೆಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಆದರೆ ಅಂತಿಮವಾಗಿ ಐದು ದಿನಗಳ ಕಾಲ ಆಚರಣೆಗೆ ಅವಕಾಶ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು .
- 20 ಜನ ಮಾತ್ರ ಗುಂಪು ಸೇರಲು ಅವಕಾಶ..
- ಕೋವಿಡ್ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪಣೆ ಸಂದರ್ಭದಲ್ಲಿ, ಗಣೇಶ ಮೂರ್ತಿ ತರುವಾಗ, ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ನಡೆಸುವಂತಿಲ್ಲ.
- ಮನೋರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ.
- ಪೊಲೀಸರ ಅನುಮತಿ ಪಡೆಯಲೇಬೇಕು.
- ಪಾಸಿಟಿವಿಟಿ ಶೇ2ಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ.
- ಉತ್ಸವ ಸ್ಥಳದಲ್ಲಿ ವ್ಯಸಿನೇಶನ್ ಡ್ರೈವ್ ಕಡ್ಡಾಯ.
- 50×50 ಅಡಿ ವಿಸ್ತೀರ್ಣದ ಪೆಂಡಾಲ್ ಮಾತ್ರ ಹಾಕಬಹುದು.
- ವಾರ್ಡ್‌ಗೆ ಒಂದು, ಊರಿಗೆ ಒಂದು ಸೂತ್ರ.
- ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಮಾತ್ರ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ