ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 2014ರ ಮಿಸ್ ಸುಪ್ರಾನ್ಯಾಷನಲ್ ಸೌಂದರ್ಯ ಸ್ಪರ್ಧೆಯ ವಿಜೇತೆ, ಭದ್ರಾವತಿ ಮೂಲದ ಆಶಾ ಭಟ್ಗೆ ಸದ್ಯ ಈ ಅವಕಾಶ ಒಲಿದು ಬಂದಿದೆ. ಈಗಾಗಲೇ ಸಾಕಷ್ಟು ಜಾಹೀರಾಥುಗಳಲ್ಲಿ ಸದ್ದು ಮಾಡುತ್ತಿರುವ ಆಶಾ, ಹಾಡುಗಾರ್ತಿ ಮಾತ್ರವಲ್ಲದೆ ರಂಗಭೂಮಿ ಹಿನ್ನಲೆಯನ್ನು ಹೊಂದಿದವರೂ ಆಗಿದ್ದಾರೆ. ಈ ವರ್ಷ ಬಾಲಿವುಡ್ನಲ್ಲಿ ತೆರೆಕಂಡ `ಜಂಗ್ಲಿ’ ಚಿತ್ರದಲ್ಲಿ ಆಶಾ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಕನ್ನಡದ ಈ ಬಹುಮುಖ ಪ್ರತಿಭೆಗೆ ರಾಬರ್ಟ್ನ ನಾಯಕಿ ಪಾತ್ರ ಸಿಕ್ಕಿದ್ದು, ಖುದ್ದು ಈಕೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ..
ಒಟ್ನಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ನಟನಾ ಪರೀಕ್ಷೆಗೆ ಇಳಿದಿರುವ ಆಶಾ ಯಶಸ್ಸು ಕಾಣ್ತಾರಾ..? ಕನ್ನಡಾಭಿಮಾನಿಗಳ ಮನಸ್ಸು ಗೆಲ್ತಾರಾ ಎಂಬುದನ್ನು ಕಾದುನೋಡಬೇಕಿದೆ.