महाकुंभ में कवरेज करने आये युट्यूबरो को मुश्किलें ज्यादा होगी!
अपने चैनल के रीच को बढ़ाने के चक्कर मे फालतू सवाल पूछेगे बाबा जी लोग चिमटे से ठोक पीट कर सही कर देंगे।🤣 pic.twitter.com/vk4WsJMRcB
— Suresh Singh (@sureshsinghj) January 12, 2025
ಈ ನಡುವೆ ಯೂಟ್ಯೂಬರ್ ಒಬ್ಬ ಧ್ಯಾನಾಸಕ್ತ ಸಾಧುಸಂತರನ್ನು ಕೆಣಕಲು ಹೋಗಿ ಧರ್ಮದೇಟು ತಿಂದಿದ್ದಾನೆ. ಮಹಾಕುಂಭದಲ್ಲಿ ಭಾಗಿಯಾಗಿದ್ದ ನಾಗಾ ಸಾಧುವೊಬ್ಬರ ಸಂದರ್ಶನ ನಡೆಸಿದ ಯೂಟ್ಯೂಬರ್ ಸನಾತನ ಸಂಪ್ರದಾಯದ ಬಗ್ಗೆ ಅಸಂಬದ್ಧ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕುಪಿತರಾದ ನಾಗಾಸಾಧು ಆ ಯೂಟ್ಯೂಬರನ್ನು ಹೊಡೆದು ಸಿಟ್ಟು ತೋರಿಸಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.