(ಚಿತ್ರ ಮಂಜು ನೀರೇಶ್ವಾಲ್ಯ)
ಮಂಗಳೂರು: ಶ್ರೀ ಪ್ರಸನ್ನ ಗಣಪತಿ ಮಂದಿರದ 21ನೇ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಶ್ರೀ ದೇವಳದಲ್ಲಿ ಶ್ರೀ ಗಣಪತಿ ಮೂಲಮಂತ್ರ ಮಹಾಯಾಗ ಆಸ್ತಿಕ ಸಮುದಾಯದ ಗಮನಸೆಳೆದಿದೆ.
ಮಂಗಳವಾರ (31.12.2024) ರಿಂದ ಪ್ರಾರಂಭಗೊಂಡು 03.01.2025, ಶುಕ್ರವಾರದಂದು ಮಹಾ ಪೂರ್ಣಾಹುತಿಯು ನಡೆಯಲಿದೆ.


ಈ ಮಹಾಯಾಗದ ಕೈಂಕರ್ಯಗಳು ಮಂಗಳವಾರ ಬೆಳಗ್ಗೆ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮಧ್ಯಾಹ್ನ ಲಘು ಪೂರ್ಣಹುತಿ, ಸಮಾರಾಧನೆ ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಅಷ್ಟಾವಧಾನ ಸೇವೆ ನೆರವೇರಿತು.
03.01.2025ರಂದು ಮಧ್ಯಾಹ್ನ 3 ಗಂಟೆಗೆ ಮಹಾ ಪೂರ್ಣಾಹುತಿ ನೆರವೇರಲಿದೆ. ಬಳಿಕ ಮಹಾ ಸಮಾರಾಧನೆ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿಯ ಹೆಚ್.ಶ್ರೀಧರ್ ಭಟ್ ತಿಳಿಸಿದ್ದಾರೆ.