ವಿಶಾಖಪಟ್ಟಣಂ ಜನರಿಗೆ ಮತ್ತೊಂದು ಆಘಾತ ಎದುರಾಗೋ ಲಕ್ಷಣಗಳು ಕಾಣುತ್ತಿದೆ.ಇಲ್ಲಿಯ ಹಿಂದೂಸ್ಥಾನ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಘಟಕದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.ಇದು ಎಚ್.ಪಿಸಿಎಲ್ನ ಕ್ರೂಡ್ ಡಿಸ್ಟಿಲೇಷನ್ ಯುನಿಟ್ನಲ್ಲಿ ತಾಂತ್ರಿಕ ದೋಷದಿಂದ ಕಾಣಿಸಿಕೊಂಡ ಹೊಗೆಯಾಗಿದ್ದು ಸದ್ಯಕ್ಕೆ ಹೊಗೆಯನ್ನು ಕಡಿಮೆ ಮಾಡಲಾಗಿದೆ.ಟೆಂಪರೇಚರ್ನಲ್ಲಿ ಬದಲಾವಣೆ ಇದ್ದ ಕಾರಣ ಈ ಹೊಗೆ ಕಾಣಿಸಿದ್ದು ಅನ್ನೋ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ಯಾವುದೇ ದೋಷವಿಲ್ಲಂತ ಪಿಆರ್ಓ ಕಾಳಿದಾಸ್ ತಿಳಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೆ ಆರ್.ಆರ್ ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ ಪಾಲಿಮಸರ್್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ರಾಸಾಯನಿಕ ಅನಿಲ ಕಾಖರ್ಾನೆಯಲ್ಲಿ ವಿಷ ಅನಿಲ ಸೋರಿಕೆಯಾಗಿ ಸುತ್ತಮುತ್ತಲಿನ ಹಳ್ಳಿಗೆ ಗಾಳಿಯಲ್ಲಿ ಇದು ಹರಡಿದೆ. ಪರಿಣಾಮ ಸಾವಿರಾರು ಜನರು ಉಸಿರಾಟದ ತೊಂದರೆಯಿಂದ ಬಳಲಿದ್ರು ಮಾತ್ರವಲ್ಲ 5 ಜನಸೇರಿ ಪ್ರಾಣಿಪಕ್ಷಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದೆ. ಕಾಖರ್ಾನೆಯಲ್ಲಿದ್ದ 2 ಟ್ಯಾಂಕರ್ಗಳಲ್ಲಿ ಇದ್ದ ವಿಷಾನಿಲ ಸೋರಿಕೆಯಾಗಿದ್ದು ಒಟ್ಟು 10 ಸಾವಿರ ಟನ್ ವಿಷ ಅನಿಲ ಸ್ಪ್ರೆಡ್ ಆಗಿತ್ತು..
ಪರಿಣಾಮ ಸುತ್ತಮುತ್ತಲಿನ ಹಳ್ಳಿಯ ಜನ , ಬೆಳಗ್ಗಿನ ವೇಳೆ ವಾಕಿಂಗ್ ಹೋಗುತ್ತಿದ್ದವರು ಆಟವಾಡ್ತಾ ಇದ್ದ ಮಕ್ಕಳು ರಸ್ತೆಯಲ್ಲಿ ಓಡಾಡುತ್ತಿದ್ದವರು ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಮಾತ್ರವಲ್ಲ ಇದರಿಂದ ಉಸಿರಾಡಲು ಪರದಾಡುತ್ತಿದ್ದ ಅಲ್ಲಿನ 5 ಕಿ.ಮೀ ಸುತ್ತಮುತ್ತಲಿನ ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ . ಜೊತೆಗೆ ಅವರನ್ನು ಅಲ್ಲಿಂದ ಸದ್ಯಕ್ಕೆ ಸ್ಥಳಾಂತಗೊಳಿಸಲಾಗಿದೆ.