ಬೆಂಗಳೂರು,ಸೆ.09: ಅನಿವಾಸಿ ಕನ್ನಡಿಗರ ಸಮುದಾಯದ ಮಾಜಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶ್ರೀ ಸಿ. ಟಿ. ರವಿ ಅವರನ್ನು ಭೇಟಿಯಾಗಿ ಬಹ್ರೈನ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ “ಕನ್ನಡ ಭವನ”ಕ್ಕೆ ಕರ್ನಾಟಕ ಸರಕಾರ ಘೋಷಿಸಿದ ಅನುದಾನವನ್ನು ಅತಿ ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ವಿನಂತಿಸಿಕೊಂಡರು. ಮಾನ್ಯ ಸಚಿವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮನವಿಯನ್ನು ತ್ವರಿತವಾಗಿ ಈಡೇರಿಸುವುದಾಗಿ ಭರವಸೆ ನೀಡಿರುತ್ತಾರೆ.
© 2020 Udaya News – Powered by RajasDigital.