ಮುಂಬೈ: ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತಾಗಿದೆ ಕೇಂದ್ರ ಸಚಿವ ರಾಣೆ ಪರಿಸ್ಥಿತಿ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದ ವಿವಾದದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಹಾರಾಷ್ಟ್ರದ ರತ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವ ವರ್ಷ ಎಂಬುದನ್ನು ತಿಳಿಯದ ಕಾರಣಕ್ಕಾಗಿ ಸಿಎಂ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಜನಾಶೀರ್ವಾದ ಯಾತ್ರೆಯಲ್ಲಿ ನಾರಾಯಣ ರಾಣೆ ಹೇಳಿದ್ದರು. ಸೋಮವಾರ ರಾಯಗಡದಲ್ಲಿ ಈ ರ್ಯಾಲಿ ನಡೆದಿದ್ದು ಜನರ ನಡುವೆ ಉತ್ಸಾಹಭರಿತರಾಗಿ ರಾಣೆ ಈ ಮಾತನ್ನಾಡಿ ವಿವಾದಕ್ಕೆ ಗುರಿಯಾದರು.
ಈ ಹೇಳಿಕೆ ಶಿವಸೇನಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತ ಹೇಳಿಕೆ ವಿರುದ್ದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕೇಂದ್ರ ಮಂತ್ರಿ ರಾಣಾ ಅವರನ್ನು ಇಂದು ಬಂಧಿಸಿದ್ದಾರೆ.