ಬೆಂಗಳೂರು: ಕೆ.ಎಸ್.ಟಿ.ಡಿ.ಸಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಒದಗಿಸುವ ಸಂಬಂಧ ಬೆಂಗಳೂರಿನ ಯಶವಂತಪುರ ಬಸ್ ನಿಲ್ದಾಣದಿಂದ ಇಂದು ಸಂಜೆಯಿಂದ ರಾಜ್ಯದ ವಿವಿಧ ಸ್ಥಳಗಳಾದ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಶಿವಮೊಗ್ಗ, ಮಡಿಕೇರಿ, ಬಾದಾಮಿ, ಹಂಪಿ (ಹೊಸಪೇಟೆ) ಸ್ಥಳಗಳಿಗೆ) ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದ್ದು, ನಿಗಮದಲ್ಲಿರುವ ಸುಸ್ಸಜ್ಜಿತ ಹವಾನಿಯಂತ್ರಿತ ವಾಹನಗಳ ಮೂಲಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಸೇವೆಯ ಸದುಪಯೋಗ ಪಡೆಯಲಿಚ್ಛಿಸುವ ಸಾರ್ವಜನಿಕರು ನಿಗಮದ ಯಶವಂತಪುರ ಕೇಂದ್ರ ಕಛೇರಿಯ ಬುಕ್ಕಿಂಗ್ ಕೌಂಟರ್, ಕೆಂಪೇಗೌಡ ಬುಕ್ಕಿಂಗ್ ಕೌಂಟರ್ ಹಾಗೂ ರೆಡ್ಬಸ್ ಪೋರ್ಟಲ್ ಹಾಗೂ ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್ಗಳ ಮುಖಾಂತರ ಮುಂಗಡ ಬುಕ್ಕಿಂಗ್ ಮಾಡಬಹುದಾಗಿರುತ್ತದೆ ಎಂದು ನಿಗಮದ ಅಧ್ಯಕ್ಷೆ ಶೃತಿ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆನ್ಲೈನ್ ಬುಕ್ಕಿಂಗ್ : www.kstdc.co, ದೂರವಾಣಿ ಸಂಖ್ಯೆ : 080-4334 4334/35, +918970650070, +918970650075 ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸದೆ.