ಉಡುಪಿ: ದೇವಳ ನಗರಿ ಉಡುಪಿ ಸಹಿತ ಜಿಲ್ಲೆಯಾದ್ಯಂತ ನೈಟ್ ಕರ್ಫ್ಯೂ ಪರಿಣಾಮಕಾರಿ ಜಾರಿಯಾಗಿದೆ. ಬುಧವಾರ ರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದರು. ರಾತಗರಿ 9 ಗಂಟೆಯೊಳಗೆ ಬಹುತೇಕ ಅಂಗಡಿಗಳು ಮುಚ್ಚಿಕೊಂಡಿದ್ದವು. ಜನರ ಸಂಚಾರವೂ ವಿರಳವಾಗಿತ್ತು.
ರಾತ್ರಿ ವೇಳೆ ವಾಹನ ಸಂಚಾರ ನಿಯಂತ್ರಿಸಲು ಹಾಗೂ ತಪಾಸಣೆಗಾಗಿ 5 ಕಡೆ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಮಲ್ಪೆ, ಉಡುಪಿ, ಮಣಿಪಾಲ ದಲ್ಲಿ 5 ಕಡೆ ತಾತ್ಕಾಲಿಕ ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.