ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆವರಣದಲ್ಲಿ 50ಕ್ಕೂ ಅಧಿಕ ಹಣ್ಣಿನ ಮತ್ತು ಔಷಧೀಯ ಸಸ್ಯಗಳನ್ನು ನೆಡಲಾಯಿತು. ಈ ಮಹತ್ವದ ಕಾಯ೯ಕ್ರಮಕ್ಕೆ ಇಲಾಖೆಯ ಸಹಾಯಕ ನಿದೇ೯ಶಕರಾದ ಕುಮಾರ್ ಬೆಕ್ಕೇರಿ ಚಾಲನೆ ನೀಡಿದರು.
ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್.ಪಿ , ಸುವಣ೯ ಎಂಟರ್ ಪ್ರೈಸಸ್ ಮುಖ್ಯಸ್ಥರಾದ ಸುನೀತಾ ಮಧುಸೂಧನ್, ಸ್ವಚ್ಚ ಭಾರತ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಮತ್ತು ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.