ಮುಂಬೈ: ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯ 23ನೇ ದಿನಕ್ಕೆ ₹1,790.10 ಕೋಟಿ ಗಳಿಸಿರುವ ಚಿತ್ರ, 2017ರಲ್ಲಿ ಬಿಡುಗಡೆಯಾಗಿ ₹1,788 ಕೋಟಿಗೂ ಅಧಿಕ ಗಳಿಸಿದ್ದ ‘ಬಾಹುಬಲಿ 2’ ದಾಖಲೆಯನ್ನು ಹಿಂದಿಕ್ಕಿದೆ.
ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈ ಹಿಂದೆ ‘ಪುಷ್ಪ 2’ ಚಿತ್ರದ ₹1,742 ಕೋಟಿ ಗಳಿಕೆಯ ದಾಖಲೆಯನ್ನೂ ಮುರಿದಿತ್ತು.

ಇದೀಗ ₹1,850 ಕೋಟಿ ಗಳಿಸಿರುವ ‘ಧುರಂಧರ್ 2’ ಚಿತ್ರದ ದಾಖಲೆಯೇ ಮುಂದಿನ ಗುರಿಯಾಗಿದೆ. ಬಳಿಕ ₹2,070 ಕೋಟಿ ಗಳಿಸಿರುವ ‘ದಂಗಲ್’ ದಾಖಲೆಯ ಮೇಲೆ ಚಿತ್ರತಂಡದ ಕಣ್ಣಿದೆ.
ವಿದೇಶಿ ಮಾರುಕಟ್ಟೆಗಳಲ್ಲೂ ‘ರಾಮಾಯಣ’ ಅಬ್ಬರ ಮುಂದುವರಿದಿದೆ. 23ನೇ ದಿನ ₹5 ಕೋಟಿ ಗಳಿಸಿದ್ದು, ಒಟ್ಟು ವಿದೇಶಿ ಆದಾಯ ₹595 ಕೋಟಿಗೆ ತಲುಪಿದೆ. 27 ದೇಶಗಳಲ್ಲಿ ನಂಬರ್ ಒನ್ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ವರದಿಯಾಗಿದೆ.















































































