ಬೆಂಗಳೂರು: ತುಮಕೂರಿನಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷಕ್ಕೆ ಮಗು ಬಲಿಯಾದ ಘಟನೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆರೋಗ್ಯ ಇಲಖೆಯ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಈ ಸರಣಿ ಘಟನೆಗಳಿಗೆ ಆರೋಗ್ಯ ಇಲಾಖೆಯ ಸಚಿವರ ಅಸಮರ್ಥತೆಯೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೂಡಲೇ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ತುಮಕೂರು ಘಟನೆ ಬಗ್ಗೆ ಆಕ್ರೋಶ ಹೊರಹಾಕಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ಆರೋಗ್ಯ ಇಲಾಖೆ ಅದೆಷ್ಟು ಹದಗೆಟ್ಟು ಹೋಗಿದೆ, ಯಾವ ಮಟ್ಟಕ್ಕೆ ಅವ್ಯವಸ್ಥೆಯಿಂದ ಕೂಡಿದೆ ಎನ್ನುವುದಕ್ಕೆ ಮಧುಗಿರಿ ವಿಧಾನಸಭೆ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ನಡೆದ 4 ವರ್ಷದ ಬಾಲಕನ ದುರಂತ ಮರಣವೇ ಸಾಕ್ಷಿ ಎಂದಿದ್ದಾರೆ.
ಇದನ್ನೂ ಓದಿ.. ಪರ್ಸಂಟೇಜ್ ಕರ್ಮಕಾಂಡ: ಪ್ರಧಾನಿಗೆ ಪತ್ರ ಬರೆದಿದ್ದ ಕೆಂಪಣ್ಣರನ್ನು ಸುಧಾಕರ್ ತಡೆದಿದ್ದರೇ? ಏನಿದು ರಹಸ್ಯ..?
ಆರೋಗ್ಯ ಇಲಾಖೆಯನ್ನು ‘ಅನಾರೋಗ್ಯ ಇಲಾಖೆ’ ಎಂದು ಬಣ್ಣಿಸಿ ಟ್ವೀಟ್ ಮಾಡಿರುವ ಹೆಚ್ಡಿಕೆ, ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದರೂ ಕರ್ತವ್ಯದಲ್ಲಿ ಇರಲಿಲ್ಲ. ಆಂಬ್ಯುಲೆನ್ಸ್ ಇದ್ದರೂ ಚಾಲಕನಿರಲಿಲ್ಲ.ಗ್ರಾಮೀಣ ಪ್ರದೇಶದ ಆರೋಗ್ಯ ಅವ್ಯವಸ್ಥೆಯ ಕ್ರೂರ ದರ್ಶನ ಇದು. ಆರೋಗ್ಯ ಇಲಾಖೆಯ ಅದಕ್ಷತೆಗೆ ಹಿಡಿದ ಕನ್ನಡಿ ಇದು. ಕೇವಲ ಒಂದೇ ವಾರದಲ್ಲಿ ಇಂಥ 2 ಸಾವುಗಳು ಅಲ್ಲೇ ಆಗಿರುವುದು ರಾಜ್ಯ ಬಿಜೆಪಿ ಸರಕಾರ ತಲೆ ತಗ್ಗಿಸುವ ಸಂಗತಿ ಎಂದಿದ್ದಾರೆ.
ನೀರಿಗೆ ಬಿದ್ದ ಕಂದನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಓಡಿಬಂದ ಪೋಷಕರಿಗೆ, ಅಲ್ಲಿ ವೈದ್ಯರೇ ಇಲ್ಲದಿದ್ದು ಕಂಡು ಎಷ್ಟು ಆಘಾತ ಆಗಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ಜೀವಬಿಟ್ಟ ಕಂದನನ್ನು ಎತ್ತಿಕೊಂಡು ಓಡುತ್ತಿದ್ದ ಆ ತಾಯಿ ತಂದೆಯನ್ನು ಕಂಡು ನನಗಾದ ನೋವು ಅಷ್ಟಿಷ್ಟಲ್ಲ.3/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ನೀರಿಗೆ ಬಿದ್ದ ಕಂದನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಓಡಿಬಂದ ಪೋಷಕರಿಗೆ, ಅಲ್ಲಿ ವೈದ್ಯರೇ ಇಲ್ಲದಿದ್ದು ಕಂಡು ಎಷ್ಟು ಆಘಾತ ಆಗಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ಜೀವಬಿಟ್ಟ ಕಂದನನ್ನು ಎತ್ತಿಕೊಂಡು ಓಡುತ್ತಿದ್ದ ಆ ತಾಯಿ ತಂದೆಯನ್ನು ಕಂಡು ನನಗಾದ ನೋವು ಅಷ್ಟಿಷ್ಟಲ್ಲ ಎಂದಿರು ಅವರು, ಪಂಚರತ್ನ ರಥಯಾತ್ರೆ ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಗೆ ಬಂದಾಗ ನಾನು ಈ ದುರಂತವನ್ನು ಕಣ್ಣಾರೆ ಕಂಡೆ. ರಾಜ್ಯದ ಆರೋಗ್ಯ ವ್ಯವಸ್ಥೆಗೆ ಬಡಿದ ಅನಾರೋಗ್ಯದ ಸಾಕ್ಷಾತ್ಕಾರ ನನಗಾಯಿತು. ರೋಗಗ್ರಸ್ತ ಬಿಜೆಪಿ ಆಡಳಿತದಲ್ಲಿ ಆಸ್ಪತ್ರೆಗಳು ಸಾವಿನ ಕೂಪಗಳೇ ಆಗಿವೆ ಎಂದಿದ್ದಾರೆ.
ಆ ಕಂದನ ಸಾವಿಗೆ ನ್ಯಾಯ ಬೇಕಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ, ಆರೋಗ್ಯ ಸಚಿವರೇ ಹೊಣೆ. ಆತ್ಮಸಾಕ್ಷಿ ಎನ್ನುವುದಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪಟದಿಂದ ಕಿತ್ತೊಗೆಯಬೇಕು ಎಂದು ಸವಾಲು ಹಾಕಿದ್ದಾರೆ.
ಅಲ್ಲದೆ; ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಮಾನತು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಡಿಎಚ್ ಓ ಅವರ ಜತೆ ಸ್ಥಳದಿಂದಲೇ ಮಾತನಾಡಿದೆ.6/6
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಮಾನತು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಡಿಎಚ್ ಓ ಅವರ ಜತೆ ಸ್ಥಳದಿಂದಲೇ ಮಾತನಾಡಿರುವುದಾಗಿ ಹೇಳಿರುವ ಹೆಚ್ಡಿಕೆ, ನೊಂದ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಮುಂದೆ ಎಲ್ಲಿಯೂ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಿದೆ ಎಂದಿದ್ದಾರೆ.
ಬಾಣಂತಿ, ಶಿಶುಗಳ ಸಾವಿನ ಪ್ರತಿಧ್ವನಿ.. ಸಚಿವ ಸುಧಾಕರ್ ಬಗ್ಗೆ RSS-BJP ಕಾರ್ಯಕರ್ತರಲ್ಲೇ ಆಕ್ರೋಶ


























































