ಬೆಂಗಳೂರು: ಬಿಗ್ ಬಾಸ್ ಸ್ಟಾರ್ ಗಿಲ್ಲಿ ನಟ ಇದೀಗ ಎಲ್ಲರ ಕುತೂಹಲದ ಕೇಂದ್ರ ಬಿಂದು. ಪ್ರಮುಖ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಒಂದೊಮ್ಮೆ ದರ್ಶನ ಅವರನ್ನು ನೋಡಲೆಂದು ಬಂದಿದ್ದ ಗಿಲ್ಲಿ ನಟ ಇದೀಗ ದರ್ಶನ ಸ್ಥಾನವನ್ನು ತುಂಬಿದ್ದಾರಂತೆ. ಹಿಂದೆ ದರ್ಶನ ಭಾಗವಹಿಸಿದ್ದ ವೇದಿಕೆಯಲ್ಲಿ ಭಾನುವಾರ ಗಿಲ್ಲಿ ನಟ ಕಾಣಿಸಿಕೊಂಡಿದ್ದರು. ಅಂದು ದರ್ಶನ ಅವಿಬರನ್ನು ಕರೆತಂದಿದ್ದ ಮುನಿರತ್ನ ಗಿಲ್ಲಿ ನಟನನ್ನು ಕರೆಸಿಕೊಂಡಿದ್ದರು.
ಮೂರು ವರ್ಷದ ಹಿಂದೆ ಇದೇ ಸ್ಟೇಜ್ ನ ದೂರದಲ್ಲಿ ನಿಂತು ನೋಡುತ್ತಿದ್ದ ವೆಕ್ತಿ ಇಂದು ಅದೇ ಸ್ಟೇಜ್ ಮೇಲೆ ಮುಖ್ಯ ಅತಿಥಿಯಾಗಿ ಬರ್ತಾನೆ ಅಂದ್ರೆ ಇದಲ್ವಾ ನಿಜವಾದ ಸಾಧನೆ ಎಂದು ಗಿಲ್ಲಿ ಅಭಿಮಾನಿಗಳು ಬಣ್ಣಿಸಿದ್ದಾರೆ.
ಡಿಬಾಸ್ ದರ್ಶನ್ ಅವ್ರ್ನ ನೆನೆದ ನಮ್ಮ ಗಿಲ್ಲಿ ನಟ..❤
ಮೂರು ವರ್ಷದ ಹಿಂದೆ ಇದೇ ಸ್ಟೇಜ್ ನ ದೂರದಲ್ಲಿ ನಿಂತು ನೋಡುತ್ತಿದ್ದ ವೆಕ್ತಿ ಇಂದು ಅದೇ ಸ್ಟೇಜ್ ಮೇಲೆ ಮುಖ್ಯ ಅತಿಥಿಯಾಗಿ ಬರ್ತಾನೆ ಅಂದ್ರೆ ಇದಲ್ವಾ ನಿಜವಾದ ಸಾಧನೆ…🔥#BBK12 #Gilli #GilliNata #Gilli_Nataraj #DBoss pic.twitter.com/NCoFUPymQd
— GilliNata Official (@GilliNata_BBK12) February 15, 2026







































































