ಚೆನ್ನೈ: ಬಂಗಾಳಕೊಳ್ಳಿಯಲ್ಲಿ ಎದ್ದ ಚಂಡಮಾರುತ, ನಿರಂತರ ಬಿರುಗಾಳಿ, ಮಳೆಯ ಹೊಡೆತದಿಂದಾಗಿ ದ್ರಾವಿಡರ ನೆಲ ತಮಿಳುನಾಡು ಅಕ್ಷರಶಃ ನಲುಗಿದೆ. ರಸ್ತೆಗಳು ನದಿಗಳಂತಾಗಿ, ಪ್ರವಾಹದ ನಡುವೆ ಜನರ ಬದುಕು ದುಸ್ತರವಾಗಿದೆ. ಹಲವು ಕುಟುಂಬಗಳು ನಿರಾಶ್ರಿತವಾಗಿವೆ. ಮನೆಗಳು ಹಾನಿಗೊಳಗಾದರೆ, ಸಾಮಾನು ಸರಂಜಾಮುಗಳೂ ಹಾಳಾಗಿವೆ.
ಭಾರೀ ಮಳೆಯಿಂದ ಸಂತ್ರಸ್ತವಾಗಿರುವ, ಚೆಂಗಲ್ಪಟ್ಟು ಜಿಲ್ಲೆಯ ಸೆಂಬಾಕ್ಕಂ ಮಂಡಲದ ಸಲಯ್ಯೂರ್ ಪ್ರದೇಶದ ಜನರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಅದೇ ಪ್ರದೇಶಕ್ಕೆ ಧಾವಿಸಿದ ಬಿಜೆಪಿ ಕಾರ್ಯಕರ್ತರು ಅಸಹಾಯಕ ಜನರ ಪಾಲಿಗೆ ಸಂಜೀವಿನಿಯಂತಾದರು.
ಚೆನ್ನೈ ಸುತ್ತಮುತ್ತಲ ಪ್ರದೇಶಗಳ ಅನೇಕ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಮಾರ್ಗದರ್ಶನದಲ್ಲಿ ರಕ್ಷಣಾ ಕಾರ್ಯ ಕೈಗೊಂಡರು. ಅಗತ್ಯ ನೆರವನ್ನೂ ನೀಡಿದರು.
Joined @BJP4TamilNadu Karyakartas to distribute relief material to Tamil Makkal in flood affected areas of Selaiyur in Sembakkam Mandal of Chengalpattu dist.
While ruling DMK & its Allies are missing in action, BJP under President @annamalai_k has been on ground to help people. pic.twitter.com/syTVNWJvYu
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) November 13, 2021
ಸಂಘಟನಾತ್ಮಕ ಸಭೆಯ ನಡುವೆ ಸೇವಾ ಕಾರ್ಯಚರಣೆ ನಡೆಸುತ್ತಾ ಈ ಸೇನಾನಿಗಳು ದೇಶದ ಗಮನ ಕೇಂದ್ರೀಕರಿಸಿದ್ದಾರೆ.
It was humbling experience to distribute relief material to people of rain affected areas in Mint Street of Harbour Constituency.
Many @BJP4TamilNadu Karyakartas & @BJYMinTN President @VinojBJP were present during the occasion.
I hope their lives will come back to normal soon. pic.twitter.com/zwrIqhvCYN
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) November 13, 2021