ತೌಕ್ತೆ ಚಂಡಮಾರುತ ಕರಾವಳಿ ತೀರದ ಜನರ ಬದುಕನ್ನೇ ತತ್ತರಗೊಳಿಸಿದೆ. ಅದರಲ್ಲೂ ಮಹಾರಾಷ್ಟ್ರದ ಹಲವೆಡೆ ಬಿರುಗಾಳೀ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಇದೇ ಸಂದರ್ಭದಲ್ಲಿ ಮಳೆ ಈ ನಟಿ ಪಾಲಿಗೆ ಸಂತಸ ತಂದಿದೆ. ನೋವುಗಳನ್ನು ಬದಿಗಿಟ್ಟು ಮುಂಬೈ ಮೂಲದ ಕಿರುತೆರೆ ನಟಿ ದೀಪಿಕಾ ಸಿಂಗ್ ನೆಲಕ್ಕುರುಳಿರುವ ಮರಗಳ ಅವಶೇಷಗಳೆಡೆ ನಿಂತು ಫೊಟೋ ತೆಗೆಸಿಕೊಂಡಿದ್ದಾರೆ. ಮಳೆ ನೀರಲ್ಲಿ ನಲಿದಾಡಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಈ ಫೊಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ಫೊಟೋ ವೀಡಿಯೋಗಳನ್ನು ನೆಟ್ಟಿಗರು ಮೆಚ್ಚಿಕೊಳ್ಳುವ ಬದಲು ಆಕ್ರೋಶ ಹೊರಹಾಕಿದವರೇ ಬಹುಪಾಲು ಮಂದಿ.
ಪ್ರಕೃತಿ ಮುನಿಸಿನಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವಶೇಷಗಳೆಡೆ ಫೋಟೋಶೂಟ್ ಮಾಡಿಸಿಕೊಂಡಿರುವುದು ಸರಿಯೇ ಎಂಬ ಕಮೆಂಟ್‌ಗಳು ವ್ಯಕ್ತವಾಗಿವೆ.