ತಿರುವನಂತಪುರ: ಕೇರಳದಲ್ಲಿ ಪಿನರಾಯ್ ವಿಜಯನ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದಿದೆ. ಈ ಸರ್ಕಾರದಲ್ಲಿ ಜೆಡಿಎಸ್ ನಾಯಕರೂ ಅಧಿಕಾರ ಹಂಚಿಕೊಂಡಿದ್ದಾರೆ.
ಕೇರಳದ ಎಡರಂಗ ಸರ್ಕಾರದಲ್ಲಿ ಏಕೈಕ ಜೆಡಿಎಸ್ ಶಾಸಕ ಮಂತ್ರಿಯಾಗಿ ಇಡೀದೇಶದ ಗಮನಸೆಳೆದಿದ್ದಾರೆ. ದೇವೇಗೌಡರ ಮುಂದಾಳತ್ವದ ಪಕ್ಷದ ಮುಖಂಡರೊಬ್ಬರು ಕೇರಳದಲ್ಲಿ ಸಚಿವರಾಗುತ್ತಿರುವುದು ಕರ್ನಾಟಕದ ಜಾತ್ಯತೀತ ಜನತಾ ದಳದ ನಾಯಕರ ಸಂತಸಕ್ಕೂ ಕಾರಣವಾಗಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಜೆಡಿಎಅ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೇರಳ LDF ಸರ್ಕಾರದ ಸಂಪುಟದಲ್ಲಿ ಕೆ.ಕೃಷ್ಣನ್ ಕುಟ್ಟಿ ಅವರು @JanataDal_S ಅನ್ನು ಪ್ರತಿನಿಧಿಸಲಿದ್ದಾರೆ. ಕೇರಳ ರಾಜ್ಯ ಜೆಡಿಎಸ್ ಶಾಸಕರಾಗಿರುವ ಕೃಷ್ಣನ್ ಕುಟ್ಟಿ ಅವರು ಸಚಿವರಾಗಿರುವುದು ಸಂತೋಷದ ವಿಷಯ. LDF ಸರ್ಕಾರ ಜನಪರ ಕೆಲಸಗಳಲ್ಲಿ ತೊಡಗಿದೆ. ಕೃಷ್ಣನ್ ಕುಟ್ಟಿ ಅವರೂ ಜನರ ಆಶೋತ್ತರಕ್ಕೆ ಸ್ಪಂದಿಸುವರೆಂಬ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದಿದ್ದಾರೆ.
ಕೇರಳ LDF ಸರ್ಕಾರದ ಸಂಪುಟದಲ್ಲಿ ಕೆ.ಕೃಷ್ಣನ್ ಕುಟ್ಟಿ ಅವರು @JanataDal_S ಅನ್ನು ಪ್ರತಿನಿಧಿಸಲಿದ್ದಾರೆ. ಕೇರಳ ರಾಜ್ಯ ಜೆಡಿಎಸ್ ಶಾಸಕರಾಗಿರುವ ಕೃಷ್ಣನ್ ಕುಟ್ಟಿ ಅವರು ಸಚಿವರಾಗಿರುವುದು ಸಂತೋಷದ ವಿಷಯ. LDFಸರ್ಕಾರ ಜನಪರ ಕೆಲಸಗಳಲ್ಲಿ ತೊಡಗಿದೆ. ಕೃಷ್ಣನ್ ಕುಟ್ಟಿ ಅವರೂ ಜನರ ಆಶೋತ್ತರಕ್ಕೆ ಸ್ಪಂದಿಸುತ್ತಾರೆಂಬ ಸಂಪೂರ್ಣ ವಿಶ್ವಾಸ ನಮಗಿದೆ. pic.twitter.com/cid2F4M0Ae
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 21, 2021