ಬೆಂಗಳೂರು: ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳರನ್ನು ಓಲೈಸುವ ದೃಷ್ಟಿಯಿಂದ ತಮಿಳು ನಾಡಗೀತೆ ಹಾಡಿಸಿರುವುದು ಅಕ್ಷಮ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ, ಅಣ್ಣಾಮಲೈ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟ ಎಂದಿರುವ ಅವರು, ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳರನ್ನು ಓಲೈಸುವ ದೃಷ್ಟಿಯಿಂದ ತಮಿಳು ನಾಡಗೀತೆ ಹಾಡಿಸಿರುವುದು ಅಕ್ಷಮ್ಯ. ಅಣ್ಣಾಮಲೈ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ. (1/6)
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) April 28, 2023
ಸಮಾಧಾನದ ವಿಷಯವೆಂದರೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಕಾಲಿಕವಾಗಿ ಮಧ್ಯಪ್ರವೇಶ ಮಾಡಿ ತಮಿಳು ನಾಡಗೀತೆ ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ನಾಡಗೀತೆ ಹಾಡಲು ಕರೆದರೆ ಯಾರೂ ಸಹ ಮುಂದೆ ಬಂದಿಲ್ಲ. ಬಿಜೆಪಿಯವರು ನಾಡಗೀತೆಗೆ ಎಷ್ಟು ಗೌರವ ಕೊಡುತ್ತಾರೆಂಬುದು ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸರಣಿ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ನಾರಾಯಣ ಗೌಡ, ‘ಕನ್ನಡಿಗರಿಗೆ ತಮಿಳರ ಬಗ್ಗೆಯಾಗಲೀ, ತಮಿಳು ನಾಡಗೀತೆ ಬಗ್ಗೆಯಾಗಲೀ ಅಗೌರವವಿಲ್ಲ. ಆದರೆ ಕರ್ನಾಟಕದಲ್ಲಿ ತಮಿಳು ನಾಡಗೀತೆ ಹಾಡಿಸುವ ಔಚಿತ್ಯವಾದರೂ ಏನು? ತಮಿಳರನ್ನು ಓಲೈಸಲು ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕಾಗಿರಲಿಲ್ಲ. ತಾಕತ್ತಿದ್ದರೆ ಇದೇ ಅಣ್ಣಾಮಲೈ ತಮಿಳುನಾಡಿನಲ್ಲಿ ಕನ್ನಡಿಗರ ಸಮಾವೇಶ ನಡೆಸಿ ಕರ್ನಾಟಕದ ನಾಡಗೀತೆ ಹಾಡಿಸಲಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.
ಅಣ್ಣಾಮಲೈ ಅಪ್ಪಟ ಕನ್ನಡಿಗರು ವಾಸಿಸುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ತಮಿಳಿನಲ್ಲಿ ಪ್ರಚಾರ ಭಾಷಣ ನಡೆಸಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷನಿಗೆ ಕರ್ನಾಟಕದಲ್ಲಿ ಏನು ಕೆಲಸ? ಈ ಕೀಳುಮಟ್ಟದ ಓಲೈಕೆ ರಾಜಕಾರಣದಿಂದ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಎಂಬುದನ್ನು ಆ ಪಕ್ಷದವರು ಮನಗಾಣಬೇಕು ಎಂದು ನಾರಾಯಣ ಗೌಡರು ಹೇಳಿದ್ದಾರೆ.
ಅಣ್ಣಾಮಲೈ ಅಪ್ಪಟ ಕನ್ನಡಿಗರು ವಾಸಿಸುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ತಮಿಳಿನಲ್ಲಿ ಪ್ರಚಾರ ಭಾಷಣ ನಡೆಸಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷನಿಗೆ ಕರ್ನಾಟಕದಲ್ಲಿ ಏನು ಕೆಲಸ? ಈ ಕೀಳುಮಟ್ಟದ ಓಲೈಕೆ ರಾಜಕಾರಣದಿಂದ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಎಂಬುದನ್ನು ಆ ಪಕ್ಷದವರು ಮನಗಾಣಬೇಕು. (5/6)
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) April 28, 2023
ಚುನಾವಣೆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಬೇರೆ ರಾಜ್ಯಗಳ ರಾಜಕಾರಣಿಗಳು, ಚಿತ್ರನಟರನ್ನು ಕರೆಯಿಸಿ ಬೇರೆ ಬೇರೆ ಭಾಷೆಗಳಲ್ಲಿ ಭಾಷಣ ಮಾಡಿಸಿ ಕನ್ನಡಿಗರನ್ನು ಅಪಮಾನಿಸುತ್ತಿದ್ದಾರೆ. ಇದು ನಾಡದ್ರೋಹದ ಕೆಲಸ. ಇಂಥವರಿಗೆ ಮತದಾನ ಸಂದರ್ಭದಲ್ಲಿ ಸರಿಯಾದ ಉತ್ತರವನ್ನು ಕನ್ನಡಿಗರು ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.