ಶ್ರೀಹರಿಕೋಟಾ: ಚಂದ್ರನ ಅಂಗಳಕ್ಕೆ ಲಗ್ಗೆ ಹಾಕುವ ಭಾರತೀಯರ ಕನಸು ಪರಿಪೂರ್ಣ ನನಸಾಗಲು ಇನ್ನೊಂದೇ ಗೇಣು ಬಾಕಿ. ಮಹತ್ವಾಕಾಂಕ್ಷೆಯ ‘ಚಂದ್ರಯಾನ -3″ ಉಪಗ್ರಹವನ್ನು ಹೊತ್ತ ಮಾರ್ಕ್ 3 ನೌಕೆ ನಭಕ್ಕೆ ಹಾರಿದೆ.
ಭಾರತದ ಅಂತರಿಕ್ಷ ಶಕ್ತಿಕೇಂದ್ರವಾಗಿರುವ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಚಂಧರಯಾನ ಆರಂಭವಾಗಿದೆ.
ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ -3 ಶಶಾಂಕ ದಕ್ಷಿಣ ಧ್ರುವದತ್ತ ಪ್ರಯಾಣ ಬೆಳೆಸಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಉಡ್ಡಯನ ಯಶಸ್ವಿಯಾಗುತ್ತಿದ್ದಂತೆಯೇ ಇಸ್ರೋ ತಂಡ ಸಂಭ್ರಮಿಸಿತು. ಭಾರತೀಯರೂ ಸಂತಸದ ನಗೆ ಬೀರಿದ್ದಾರೆ.
India today embarked on its historic space journey with the successful launch of Chandrayaan-3.
My heartfelt congratulations to the @ISRO scientists whose tireless pursuit has today propelled India on the path of scripting a remarkable space odyssey for generations to cherish. pic.twitter.com/YPZCHPbZoq
— Amit Shah (Modi Ka Parivar) (@AmitShah) July 14, 2023