ವಿಜಯಪುರ: ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್‌ಗೆ ಪ್ರತಿಷ್ಠಿತ ಅಖಾಡವಾಗಿದ್ದ ಸಿಂದಗಿ ವಿಧಾನಸಭಾ ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಭಾರಿಸಿದೆ.
ಈ ಜಿದ್ದಾಜಿದ್ದಿನ ಅಖಾಡದಲ್ಲಿ ಹೀನಾಯ ಸೋಲುಂಡಿರುವ ಜೆಡಿಎಸ್‌ಗೆ ಮುಖಭಂಗವಾದರೆ, ಅನುಕಂಪದ ಅಲೆಯ ಅನುಕೂಲ ಪಡೆಯುವ ಕಾಂಗ್ರೆಸ್ ಪ್ರಯತ್ನವೂ ಫಲಕಾಣಲಿಲ್ಲ.
ಸಿಂಧಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು 31088 ಮತಗಳ ಭಾರೀ ಅಂತರದಿಂದ ದಿಗ್ವಿಜಯ ಸಾಧಿಸಿದ್ದಾರೆ.
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ಗರಡಿಗೆ ಕರೆಸಿಕೊಂಡು ಸೆಣಸಾಡಲು ಅಖಾಡಕ್ಕಿಳಿಸಿತ್ತು. ಆದರೆ ಕಾಂಗ್ರೆಸ್ ನಿರೀಕ್ಷೆ ಹುಸಿಯಾಯಿತು. ಅಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಐದನೇ ಬಾರಿ ಕ್ಷೇತ್ರದಲ್ಲಿ ನಿರಂತರ ಸೋಲು ಅನುಭವಿಸಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಹಿತ ಜೆಡಿಎಸ್ ನಾಯಕರನೇಕರು ತಮ್ಮ ಪಕ್ಷದ ಹುರಿಯಾಳು ನಾಜಿಯಾ ಅಂಗಡಿ ಅವರನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಈ ಕ್ಷೇತ್ರ ಈ ವರೆಗೂ ಜೆಡಿಎಸ್ ಕೈಯಲ್ಲಿತ್ತು. ಆದರೆ ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಠೇವಣಿಯನ್ನೇ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ-ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. ಮುಖಭಂಗ ಅನುಭವಿಸಿದೆ.
ಮತಗಳ ಹಂಚಿಕೆ ಹೀಗಿದೆ:
- ರಮೇಶ ಭೂಸನೂರ (ಬಿಜೆಪಿ) 93380 ಮತಗಳು
- ಅಶೋಕ ಮನಗೂಳಿ (ಕಾಂಗ್ರೆಸ್) 62292 ಮತಗಳು
- ನಾಜಿಯಾ ಅಂಗಡಿ (ಜೆಡಿಎಸ್) 4321 ಮತಗಳು.