ಬೆಂಗಳೂರು: ಯಮಕಿಂಕರ ಕೊರೋನಾ ಅಟ್ಟಹಾಸಕ್ಕೆ ಸಾಲು ಸಾಲು ಸೆಲೆಬ್ರೆಟಿ ಕುಟುಂಬಗಳು ತಬ್ಬಲಿಯಾಗುತ್ತಿವೆ. ಇದೀಗ ಕನ್ನಡ ಕಿರುತೆರೆಯ ಸರಿಗಮಪ ಖ್ಯಾತಿಯ ಪೊಲೀಸ್ ಸುಬ್ರಹ್ಮಣ್ಯ ಅವರೂ ಕೊರೋನಾ ಸಂಕಟ ಕಾಲದಲ್ಲಿ ಕರಾಳ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಕೊರೋನಾ ಸಂದಿಗ್ಧ ಕಾಲದಲ್ಲೇ ಸುಬ್ರಹ್ಮಣ್ಯ ಅವರ ಪತ್ನಿ ಜ್ಯೋತಿ ವಿಧಿವಶರಾಗಿದ್ದು ಅವರ ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.
ಸುಬ್ರಹ್ಮಣ್ಯ ಪತ್ನಿ ಜ್ಯೋತಿ ಕಳೆದೊಂದು ವಾರದಿಂದ ಅಸ್ವಸ್ಥರಾಗಿದ್ದಾರೆನ್ನಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ ಅವರು ಸೋಮವಾರ ವಿಧಿವಶರಾಗಿದ್ದಾರೆ ಎನ್ನಲಾಗಿದೆ.
ಕೋಲಾರ ಮೂಲದ ಸುಬ್ರಹ್ಮಣ್ಯ ಅವರು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಿಗಮಪ ಮೂಲಕ ಸುಬ್ರಹ್ಮಣ್ಯ ಅವರು ಮನೆಮಾತಾಗಿದ್ದಾರೆ.
ಹಲವಾರು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಗೂ ತಮ್ಮ ಹಾಡಿನ ಮೋಡಿ ಮೂಲಕ ಸುಬ್ರಹ್ಮಣ್ಯ ಅವರು ಮೌಲ್ಯ ತುಂಬಿದ್ದಾರೆ.
ಸಮಧುರ ಹಾಡುಗಾರರಾಗಿರುವ ಸುಬ್ರಹ್ಮಣ್ಯ ಅವರ ಬಗ್ಗೆ ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಗಾನ ಕಲೆಯಿಂದಾಗಿ ಸುಬ್ರಹ್ಮಣ್ಯ ಅವರು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ.
ಎಲ್ಲರನ್ನೂ ಹಾಡಿನ ಮೋಡಿಯಿಂದ ರಂಜಿಸುವ ಸುಬ್ರಹ್ಮಣ್ಯ ಅವರೇ ಇದೀಗ ನೋವೊನ ಮಡುವಿನಲ್ಲಿದ್ದಾರೆ.