ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಮದನ್ ದಾಸ್ ದೇವಿ ಅವರ ನಿಧನ ಸಂಘ ಕ್ಷೇತ್ರದಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಮದನ್ ದಾಸ್ ದೇವಿ ಅವರು ಜುಲೈ 24ರಂದು ಮುಂಜಾನೆ ಬೆಂಗಳೂರಿನಲ್ಲಿ ಹೃದಯಸ್ತಂಭನಕ್ಕೀಡಾಗಿ ವಿಧಿವಶರಾಗಿದ್ದರು.
ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸರಸಂಘಚಾಲಕ್ ಮೋಹನ್ ಭಾಗವತ್ ಅವರು, ಹಿರಿಯ ಪ್ರಚಾರಕ್ ಆಗಿದ್ದ ಮದನ್ ದಾಸ್ ದೇವಿ ಅವರ ಸಂಘಟನಾ ವೈಖರಿಯನ್ನು ನೆನಪಿಸಿಕೊಂಡರು.
RSS Sarasanghachalak Dr Mohan Bhagwat paid tributes to Veteran RSS Pracharak Sri Madan Das Devi at Pune, Maharashtra. pic.twitter.com/CPjewEQ8Ej
— Rajesh Padmar (@rajeshpadmar) July 25, 2023
ಸಹ ಸರಕಾರ್ಯವಾಹರಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿಯಾಗಿ ಹಲವು ಕೊಡುಗೆಗಳನ್ನು ನೀಡಿರುವ 81 ವರ್ಷ ಹರೆಯದ ಮದನ್ ದಾಸ್ ದೇವಿ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ವಯೋಸಹಜ ವಿಶ್ರಾಂತಿ ಮತ್ತು ಆರೈಕೆಯಲ್ಲಿದ್ದರು.
ಜೇಷ್ಠ ಪ್ರಚಾರಕರ ನಿಧನಕ್ಕೆ ಸಂಘ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೂ ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡಾ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
#WATCH | Maharashtra: Union Home Minister Amit Shah, BJP national president JP Nadda, Union Minister Dharmendra Pradhan and Maharashtra Deputy CM Devendra Fadnavis pay last respects to RSS leader Madan Das Devi, in Pune pic.twitter.com/u4knRhkalI
— ANI (@ANI) July 25, 2023
ಬೆಂಗಳೂರಿನಲ್ಲಿರುವ ಸಂಘದ ಕಾರ್ಯಾಲಯ “ಕೇಶವ ಕೃಪಾ’ದಲ್ಲಿ ಸೋಮವಾರ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹ ಸಿ.ಆರ್.ಮುಕುಂದ್ ಅವರು ಮದನ್ ದಾಸ್ ದೇವಿ ಅವರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದರು.
ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಸ್ಥಾಣುಮಾಲಯನ್, ಹಿರಿಯ ಸಾಮಾಜಿಕ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್, ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಪ್ರಫುಲ್ಲ ಆಕಾಂತ್, ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಂ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಚಿಂತಕ ಪ್ರೊ| ಕೆ.ಇ.ರಾಧಾಕೃಷ್ಣ ಸಹಿತ ಅನೇಕ ಪ್ರಮುಖರು ಮದನ್ ದಾಸ್ ದೇವಿ ಅವರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದರು.
ಮಂಗಳವಾರ ಬೆಳಗ್ಗ ಗಂಟೆಗೆ ಪುಣೆಯ ವೈಕುಂಠ ಶ್ಮಶಾನದಲ್ಲಿ ಅಂತಿಮ ವಿಧಿವಿಧಾನ ನೆರವೇರಿದ ಸಂದರ್ಭದಲ್ಲೂ ಸಂಘದ ರಾಷ್ಟ್ರೀಯ ಪ್ರಮುಖರು ಉಪಸ್ಥಿತರಿದ್ದರು ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.