ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಿಂಚಿನ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 1.59 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸಿಂಗಾಪುರದಿಂದ ಬೆಂಗಳೂರಿಗೆ ಬಂದಿಳಿದ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳು 2 ಕೆ.ಜಿ 610 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ಕಣ್ಣಪ್ಪಿಸಲು ಬೆಲ್ಟ್‌ನ ಒಳಗಡೆ ಚಿನ್ನ ಅಡಗಿಸಿಟ್ಟಿದ್ದರು. ತಪಾಸಣೆ ವೇಳೆ ಬೆಲ್ಟ್ ಒಳಗಡೆ ಅಡಗಿಸಿಟ್ಟಿದ್ದ ಚಿನ್ನದ ಸರಗಳು ಕಂಡು ಬಂದಿದ್ದು, ಚಿನ್ನವನ್ನು ಜಪ್ತಿ ಮಾಡಿಕೊಂಡ ಅಧಿಕಾರಿಗಳು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.