ಹಾಲಿವುಡ್ ಅಕ್ಷರಶಃ ಬೆಚ್ಚಿಬಿದ್ದಿದೆ. ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟನ ಕೈಯಲ್ಲಿದ ಬಂದೂಕಿನಿಂದ ಚಿಮ್ಮಿದ ಗುಂಡು ತಗುಲಿ ಸಿನಿಮಾಟೋಗ್ರಾಫರ್ ಸಾವನ್ನಪ್ಪಿದ ದಾರುಣ ಘಟನೆ ಮೆಕ್ಸಿಕೋದಲ್ಲಿ ಸಂಭವಿಸಿದೆ.
ಮೆಕ್ಸಿಕೋದ ಸಂತ ಫೆ ಹೊರವಲಯದಲ್ಲಿ ನಟ ಅಲೆಕ್ ಬಾಲ್ಡ್ವಿನ್ ಅವರ “ರಸ್ಟ್’ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಶುಕ್ರವಾರ ಬಾಲ್ಡ್ವಿನ್ ಅವರಿಂದ ಫೈರಿಂಗ್ ಸೀನ್ ಶೂಟಿಂಗ್ ಏರ್ಪಾಡಾಗಿತ್ತು. ಈ ಶೂಟಿಂಗ್ ಸಂದರ್ಭದಲ್ಲಿ ನಟ ಅಲೆಕ್ ಬಾಲ್ಡ್ವಿನ್ ಅವರಲ್ಲಿದ್ದ ಬಂದೂಕಿನಿಂದ ಹಾರಿಸಿದ ಗುಂಡು ಅಕಸ್ಮಾತಾಗಿ ಸಿನಿಮಾಟೋಗ್ರಾಫರ್ ಹೆಲಿನಾ ಹಚಿನ್ಸ್’ಗೆ ತಾಗುಲಿದೆ. ಕೂಡಲೇ ಅವರನ್ನು ಹೆಲಿಕಾಪ್ಟರ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಚಿತ್ರೀಕರಣ ವೇಳೆ ಪ್ರಾಪ್ ಗನ್ ಬಳಸಲಾಗಿತ್ತು. ಶೂಟಿಂಗ್ ವೇಳೆ ಮಿಸ್ ಫೈರ್ ಆಗಿ ಈ ಘೋರ ಅನಾಹುತ ಸಂಭವಿಸಿದೆ. ಈ ಘಟನೆಯಲ್ಲಿ ನಿರ್ದೇಶಕ ಜೋಯೆಲ್ ಸೌಜಾಗೂ ಗಾಯವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.