ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ರೋಲಿಂಗ್ ಶೀಲ್ಡ್ ನೊಂದಿಗೆ ಪ್ರಶಸ್ತಿ-2023ನ್ನು ಪಡೆದುಕೊಂಡಿದೆ. ಈ ಮೂಲಕ KSRTC ನಿಗಮವು ಸತತ 9ನೇ ಬಾರಿಗೆ ಸದರಿ ಪ್ರಶಸ್ತಿ ಪಡೆದು ಗಮನಸೆಳೆದಿದೆ.
ಬೆಂಗಳೂರಿನ ರಾಜಭವನದ ಗ್ಲಾಸ್ ಹೌಸ್‌ನಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಮಾರಂಭ ಗಮನಸೆಳೆಯಿತು. ಇದೇ ಸಮಾರಂಭದಲ್ಲಿ ರಾಜ್ಯದ ಸರ್ಕಾರಿ ಸಂಸ್ಥೆಗಳ ಪೈಕಿ ಅತೀ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹಣಾ ಮಾಡಿರುವ ಸಂಸ್ಥೆಯ ಪ್ರಶಸ್ತಿಯನ್ನು KSRTCಗೆ ನೀಡಲಾಯಿತು. ಸತತ 9ನೇ ಬಾರಿಗೆ ರೋಲಿಂಗ್ ಶೀಲ್ಡ್ ಪ್ರಶಸ್ತಿಯನ್ನು ಕೆಎಸ್ಸಾರ್ಟಿಸಿಗೆ ಪ್ರಧಾನ ಮಾಡಲಾಯಿತು.
ಲೆಫ್ಟಿನೆಂಟ್ ಜನರಲ್ ಬಿ.ಕೆ. ರಪ್ಸವಾಲ್ AVSM, VSM ಕಮಾಂಡೆಂಟ್, ಎ.ಎಸ್.ಸಿ. ಸೆಂಟರ್ ಅಂಡ್ ಕಾಲೇಜ್ ರವರು ಡಾ. ನಂದಿನಿ ದೇವಿ (ನಿರ್ದೇಶಕರು ಸಿಬ್ಬಂದಿ & ಜಾಗೃತ) ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ವೆಂಕಟೇಶ ರೆಡ್ಡಿ ಜಿ.ಎ, (ನಿವೃತ್ತ), AVSM, SC, VSM, ಬ್ರಿಗೇಡಿಯರ್ ಎಮ್. ಬಿ. ಶಶಿಧರ್ (ನಿವೃತ್ತ) ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಏರ್ ಕಮಾಂಡರ್. ಬಿ.ಎಸ್. ಕನ್ವಾರ್, VSM, .ಡಿಡಿಜಿ. ಎನ್.ಸಿಸಿ., ಹಾಗೂ ಬ್ರಿಗೇಡಿಯರ್ ಎಂ.ಆರ್.ಕೆ. ರಾಜೇಶ್ ಪಣೀಕರ್ ಸ್ಟೇಶನ್ ಕಮಾಂಡರ್ ಕೆ. ಅಂಡ್ ಕೆ. ಸಬ್ ಏರಿಯಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.


























































