ಈಕೆ ರಾತ್ರೋ ರಾತ್ರಿ ಫೇಮಸ್ ಆಗಿದ್ದಾಳೆ. ರಾಬರ್ಟ್ ಸಿನಿಮಾದ ಹಾಡನ್ನು ಪ್ರತ್ಯಕ್ಷವಾಗಿ ಹಾಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದಾಳೆ. ಹಾಗಾದರೆ ಈ ‘ಮಂಗ್ಲಿ’ ಯಾರು?
ಬೆಂಗಳೂರು: ಕುರುಕ್ಷೇತ್ರ ನಂತರ ಇದೀಗ ರಾಬರ್ಟ್ ಮೂಲಕ ಮಿಂಚಲು ಚಾಲೆಂಜಿಂಗ್ ಸ್ಟಾರ್ ಸಜ್ಜಾಗಿದ್ದಾರೆ. ಅವರ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಸೆನ್ಸಾರ್ ಸರ್ಟಿಫಿಕೆಟ್ ಕೂಡಾ ಸಿಕ್ಕಿದ್ದು ಸದ್ಯದಲ್ಲೇ ‘ರಾಬರ್ಟ್’ ತೆರೆಯ ಮೇಲೆ ಕಮಾಲ್ ಮಾಡಲಿದೆ.
ಇದೇ ವೇಳೆ, ‘ರಾಬರ್ಟ್’ ತೆಲುಗು ಭಾಷೆಯಲ್ಲೂ ಭಾರೀ ಸದ್ದು ಮಾಡುತ್ತಿದೆ. `ಕಣ್ಣು ಹೊಡಿಯಾಕ’ ಹಾಡಿನ ತೆಲುಗು ಹಾಡು `ಕಣ್ಣೇ ಅದಿರಿಂದಿ’ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಫೇಮಸ್ ಆಗಿದೆ.
ಹೈದ್ರಾಬಾದ್ನಲ್ಲಿ ನಡೆದ ‘ರಾಬರ್ಟ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ಗಾಯಕಿ ಮಂಗ್ಲಿ ಮಾಡಿದ ಮೋಡಿ ಎಲ್ಲರ ಗಮನಸೆಳೆದಿದೆ. ಈ ಕಾರ್ಯಕ್ರಮದ ನಂತರ ಈಕೆ ಕರ್ನಾಟಕದ ಕ್ರಶ್ ಆಗಿದ್ದಾರೆ. ಈ ಚೆಲುವೆಯ ಮೋಡಿ ಹೇಗಿದೆ ಎಂಬುದೇ ಕುತೂಹಲ.
https://youtu.be/LyuX846XGb0