ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಗೊಮ್ಮೆ ಈಗೊಮ್ಮೆ ಸುದ್ದಿಯಾಗುಗುತ್ತರುವ ಮಾಜಿ ಸಚಿವ ಸಿ.ಎಂ.ಉದಾಸಿ ಇಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೆಟಿಯಾಗಿ ರಾಜಕೀಯ ವಿದ್ಯಮಾನಗಳಿಗೆ ರಂಗು ತಂದಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಜನತಾ ಪರಿವಾರದ ನಾಯಕರನ್ನು ಭೇಟಿಯಾಗಿ ಕುತೂಹಲಕಾರಿ ಬೆಳವಣಿಗೆಗೆ ಮುನ್ನುಡಿ ಬರೆದಿರುವ ಸಿ.ಎಂ.ಇಬ್ರಾಹಿಂ ಆವರು ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇವರ ಈ ನಡೆ ಬಗ್ಗೆ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಅನೇಕ ಮುಖಂಡರು ಬಹಳಷ್ಟು ನಿರೀಕ್ಷೆಯೊಂದಿಗೆ ತಮ್ಮದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಆದ ಸಿ.ಎಂ.ಇಬ್ರಾಹಿಂ ಅವರು ಇಂದು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಮತ್ತಷ್ಟು ಕುತೂಹಲ ಕೆರಳುವಂತೆ ಮಾಡಿದ್ದಾರೆ. ಈ ಇಬ್ಬರು ನಾಯಕರೂ ಜನತಾ ಪರಿವಾರದಲ್ಲಿ ಗುರುತಿಸಿಕೊಂಡವರು. ಅಲ್ಲಿಂದಲೇ ಸಮ್ಮಿತ್ರರಾಗಿರುವ ಇವರು ಅನೇಕ ದಶಕಗಳಿಂದ ರಾಜಕೀಯ ಮಿತ್ರರೂ ಆಗಿದ್ದಾರೆ.
ಪ್ರಸ್ತುತ ಒಂದೇ ಪಕ್ಷದಲ್ಲಿರುವ ಈ ನಾಯಕರು ಇಂದು ಸಹಜವಾಗಿಯೇ ಭೇಟಿ ಮಾಡಿದ್ದರೆ ಮಹತ್ವ ಇರುತ್ತಿರಲಿಲ್ಲ. ಆದರೆ ಕೆಲ ಸಮಯದಿಂದ ಜನತಾ ಪರಿವಾರ ಹಿನ್ನೆಲೆಯ ನಾಯಕರ ಮನೆ ಬಾಗಿಲು ತಟ್ಟುತ್ತಿರುವ ನಡುವೆ ಸಿದ್ದರಾಮಯ್ಯನವರ ನಿವಾಸಕ್ಕೆ ಅವರು ಎಂಟ್ರಿ ಕೊಟ್ಟಿದ್ದರಿಂದಾಗಿ ಪ್ರಸಕ್ತ ಸುದ್ದಿಗಳಿಗೆ ರೋಚಕತೆ ಬಂದಿದೆ.