ಬೆಂಗಳೂರು: ಬೆಂಗಳೂರು ಪೊಲೀಸ್ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಆಯೋಜಿಸಿದ್ದ ಗಮನಸೆಳೆಯಿತು. CAR ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸೇವಾ ಕವಾಯತನ್ನು ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ನಿಮಿತ್ತ ವಿಶೇಷವಾಗಿ ಎಲ್ಲಾ ಮಹಿಳಾ ಕವಾಯತನ್ನು ಆಯೋಜಿಸಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಭಾಗವಹಿಸಿ ಪರೇಡ್‌ನ ಗೌರವ ವಂದನೆ ಸ್ವೀಕರಿಸಿದರು.

ಆಗ್ನೇಯ ವಿಭಾಗದ DCP ಮೊಹಮ್ಮದ್ ಸುಜೀತಾ ಅವರು ನೇತೃತ್ವ ವಹಿಸಿದ್ದರು. ವೈಟ್‌ಫೀಲ್ಡ್ ವಿಭಾಗದ ACP ರೀನಾ ಸುವರ್ಣ ಅವರು ಎರಡನೇ ಆದೇಶದಾಧಿಕಾರಿಯಾಗಿ (Second-in-Command) ಗಮನಸೆಳೆದರು. ವಿಶೇಷ ‘ರಾಣಿ ಚೆನ್ನಮ್ಮ ಪಡೆ’ ಪ್ರದರ್ಶನದ ಮೂಲಕ ಮಹಿಳಾ ಪೊಲೀಸ್ ಸಿಬ್ಬಂದಿಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಿದ್ಧತೆ, ಸ್ವಯಂ-ರಕ್ಷಣಾ ಕೌಶಲ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಲಾಯಿತು.
ಇಂದಿನ ‘ವಿಶೇಷ ಮಹಿಳಾ ಸೇವಾ ಕವಾಯತುವಿನ ಒಂದು ದೃಶ್ಯ CAR ಪ್ರಧಾನ ಕಚೇರಿಯಲ್ಲಿ.
ಮಹಿಳಾ ಅಧಿಕಾರಿಣಿಯರು ಕವಾಯತುವಿಗೆ ನಾಯಕತ್ವ ವಹಿಸಿದರು, ರಾಣಿ ಚೆನ್ನಮ್ಮ ಪಡೆಯು ಪ್ರದರ್ಶನದ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು, ಮತ್ತು 60 ಅಧಿಕಾರಿಗಳನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು.A glimpse from today’s special All-Women… pic.twitter.com/HIBmGJawPo
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) March 6, 2026
ಕಾರ್ಯಕ್ರಮದಲ್ಲಿ 60 ಮಹಿಳಾ ಅಧಿಕಾರಿಗಳನ್ನು ಅವರ ನಿಷ್ಠಾವಂತ ಸೇವೆಗಾಗಿ ಸನ್ಮಾನಿಸಲಾಯಿತು. ಮಹಿಳಾ ಫಲಾನುಭವಿಗಳಿಗೆ ಸಹಾಯ ಮಾಡುವ ಪರಿಹಾರ್ ಉಪಕ್ರಮವನ್ನೂ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಫಲಾನುಭವಿಗಳಿಗಾಗಿ ದೇಣಿಗೆಯಾಗಿ ನೀಡಲಾದ ಇ-ಆಟೋವನ್ನು ಪ್ರದರ್ಶಿಸಿ ಗೌರವಿಸಲಾಯಿತು. ಈ ವಿಶೇಷ ಕಾರ್ಯಕ್ರಮವು ಮಹಿಳಾ ಪೊಲೀಸ್ ಸಿಬ್ಬಂದಿಯ ಶಕ್ತಿ, ಸಮರ್ಪಣೆ ಮತ್ತು ಸಮಾಜ ಸೇವೆಯನ್ನು ಗೌರವಿಸುವ ಅರ್ಥಪೂರ್ಣವಾಗಿ ನೆರವೇರಿತು.






















































