ದೆಹಲಿ; ಹಿಂದೂ ಸಮಾಜದ ಪ್ರತಿಷ್ಠೆ ಹಾಗೂ ಭಕ್ತಿ, ಶಕ್ತಿಯ ಪ್ರತೀಕವಾಗಿರುವ ಪ್ರಭು ಶ್ರೀರಾಮಚಂದ್ರನ ಕೈಂಕರ್ಯಕ್ಕಾಗಿ ದೇಣಿಗೆಯ ಮಹಾಪೂರವೇ ಹರಿದುಬಂದಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲಾಗುತ್ತಿದ್ದು ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹವಾಗಿದೆ. ಒಂದು ಅಂದಾಜು ಪ್ರಕಾರ ಒಂದೂವರೆ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ಸಂಗ್ರಹವಾಗಿದ್ದು ರಾಮ ಭಕ್ತರ ಪಾಳಯದಲ್ಲಿ ಮಂದಹಾಸ ಮೂಡಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ದೇಣಿಗೆ ಸಂಗ್ರಹದಲ್ಲಿ ತೊಡಗಿದು ಈ ಕಾರ್ಯದಲ್ಲಿ ತೊಡಗಿರುವ ಸಂಘಪರಿವಾರದ ಕಾರ್ಯಕರ್ತರು, ಇದುವರೆಗೂ 1,511 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.
ಜನವರಿ 15ರಂದು ಆರಂಭವಾಗಿರುವ ದೇಣಿಗೆ ಸಂಗ್ರಹ ಅಭಿಯಾನವು ಫೆಬ್ರವರಿ ಅಂತ್ಯದವರೆಗೂ ನಡೆಯಲಿದೆ. ಈ ಪೈಕಿ ಈವರೆಗೂ ಒಂದೂವರೆ ಸಾವಿರ ಕೋಟಿಗಿಂತಲೂ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ. ಫೆ.11ರ ಗುರುವಾರ ಸಂಜೆಯವರೆಗೂ 1,511ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಾಹಿತಿ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಈ ಸಂಗ್ರಹ ಮೊತ್ತ ಎರಡು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಅಭಿಯಾನದ ಹೈಲೈಟ್ಸ್
- ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ದೇಣಿಗೆ ಸಂಗ್ರಹ
- ಸುಮಾರು ನಾಲ್ಕು ಲಕ್ಷ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹ
- ಹನ್ನೊಂದು ಕೋಟಿ ಕುಟುಂಬಗಳ ಸಂಪರ್ಕ ಗುರಿ
- 492 ವರ್ಷಗಳ ನಂತರ ಧರ್ಮ ಕಾರ್ಯಕ್ಕಾಗಿ ದೇಶಾದ್ಯಂತ ದೇಣಿ ಅಭಿಯಾನ
- ವಿದೇಶದಲ್ಲಿರುವ ಹಿಂದೂಗಳಿಂದಲೂ ದೇಣಿಗೆ
- ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಕ್ರೈಸ್ತ ಬಂಧುಗಳಿಂದಲೂ ದೇಣಿಗೆ