ಚಿಕ್ಕಮಗಳೂರು: ಯುವಕರನ್ನು ರಾಷ್ಟ್ರೀಯವಾದಿ ಸೇನಾನಿಗಳನ್ನಾಗಿ ರೂಪಿಸುತ್ತಿರು ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಜ್ಯದ ವಿವಿಧೆಡೆ ಪ್ರಾಥಮಿಕ ಶಿಕ್ಷಾ ವರ್ಗವನ್ನು ಆಯೋಜಿಸಿದೆ. ದಸರಾ ರಜೆ ಸಂದರ್ಭದಲ್ಲಿ ಯುವಜನರನ್ನು ಸೇರಿಸಿ ಬೌದ್ಧಿಕ, ಶಾರೀರಿಕ ಶಿಕ್ಷಣ ನೀಡುವ ಈ ಶಿಬಿರಗಳಲ್ಲಿ ಈ ಬಾರಿಯೂ ಸಾವಿರಾರು ಮಂದಿ ಭಾಗವಹಿಸಿದರು. ಈ ಪೈಕಿ ಚಿಕ್ಕಮಗಳೂರಿನಲ್ಲಿನ ಶಿಬಿರವು ನಾಡಿನ ಗಮನಸೆಳೆಯಿತು. ಈ ಸಂದರ್ಭದಲ್ಲಿ ನಡೆದ ಪಥಸಂಚಲನದಲ್ಲಿ ಗಣವೇಷಧಾರಿ ಸ್ವಯಂಸೇವಕರು ಮಳೆಯನ್ನೂ ಲೆಕ್ಕಿಸದೆ ಸಾಗಿ ಶಿಸ್ತಿನ ಸಿಪಾಯಿಗಳಾಗಿ ಚಿತ್ತ ಸೆಳೆದರು.
ಗುರುಕುಲ ಮಾದರಿಗೆ ತತ್ಸಮಾನವಾಗಿ ಸಂಸ್ಕೃತಿ ಸಂಸ್ಕಾರ ಶಿಕ್ಷಣವನ್ನು ಈ ಶಿಭಿರದಲ್ಲಿ ಶಿಕ್ಷಾರ್ಥಿಗಳಿಗೆ ಹೇಳಿಕೊಡಲಾಗಿತ್ತು. ಶಿಬಿರದ ಅಂತಿಮ ಹಂತದಲ್ಲಿ ಶಿಕ್ಷಾರ್ಥಿಗಳು ತಾವು ಅಭ್ಯಾಸ ಮಾಡಿದ ಶಾರೀಕ ಕಸರತ್ತನ್ನು ಅನಾವರಣ ಮಾಡಿದರು. ಶಾರೀರಿಕ ಪ್ರದರ್ಶನಗಳು, ಸಮರಾಭ್ಯಾಸದ ಕಸರತ್ತುಗಳೂ ನೋಡುಗರನ್ನು ನಿಬ್ಬೆರಗಾಗಿಸಿದವು.
ಅಷ್ಟರಲ್ಲೇ ವರುಣನ ಆರ್ಭಟವೂ ಎದುರಾಯಿತು. ಆದರೂ ಸ್ವಯಂಸೇವಕರು ಜಪ್ಪೆನ್ಬಲಿಲ್ಲ. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಪಥಸಂಚಲನ ಕೈಗೊಂಡರು. ರಸ್ತೆಗಳಲ್ಲಿ ಪ್ರವಾಹ ರೂಪದಲ್ಲಿ ನೀರು ಆವರಿಸಿದ್ದರೂ ಗಣವೇಷಧಾರಿ ಸಂಘ ಕಾರ್ಯಕರ್ತರ ನಡಿಗೆಯಲ್ಲಿ ಶಿಸ್ತು ತಪ್ಪಲಿಲ್ಲ.
https://twitter.com/VSKKarnataka/status/1581314413914910720?t=aizdR4aAXVO0Pgtu8fKHiA&s=19






































































