ದೆಹಲಿ : ದೇಶವನ್ನಾಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಆಸ್ತಿ ಗೊಂದಿದ್ದಾರೆ ಗೊತ್ತಾ? ಕಳೆದ ವರ್ಷ 2.85 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮೋದಿ ಹೊಂದಿದ್ದರು. ಈ ವರ್ಷ ಇದಕ್ಕೆ 22 ಲಕ್ಷ ರೂಪಾಯಿ ಸೇರಿ 3.07 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ವೆಬ್ಸೈಟ್ ನಲ್ಲಿ ವಿವರ ನೀಡಿದ್ದಾರೆ.
ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಅವರ ಆಸ್ತಿ 22 ಲಕ್ಷ ರೂ. ಏರಿಕೆಯಾಗಿದೆ. ಸ್ಟೇಟ್ ಬ್ಯಾಂಕ್ನಲ್ಲಿರುವ ಎಫ್ಡಿ ಬಡ್ಡಿಯು ಈ ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.
ಮೋದಿ ಆಸ್ತಿಯ ಸಂಕ್ಷಿಪ್ತ ವಿವರ ಇಲ್ಲಿದೆ:
- ಮೋದಿ ಬಳಿ ಇರುವ ನಗದು 36 ಸಾವಿರ ರೂಪಾಯಿ.
- ಬ್ಯಾಂಕ್ ಖಾತೆಯಲ್ಲಿ 2.5 ಲಕ್ಷ ರೂಪಾಯಿ.
- 1.5 ಲಕ್ಷ ರೂಪಾಯಿ ಮೌಲ್ಯದ ಜೀವ ವಿಮೆ.
- ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ 8.9 ಲಕ್ಷ ರೂಪಾಯಿ.
- ಕಳೆದ ವರ್ಷ 1.60 ಕೋಟಿ ರೂಪಾಯಿ ಮೌಲ್ಯದ FD. ಇದು ಈ ಬಾರಿ 1.86 ಕೋಟಿ ರೂಪಾಯಿಗೆ ಏರಿಕೆ.
- ಸ್ಥಿರಾಸ್ತಿ: ಗಾಂಧಿನಗರದಲ್ಲಿ ಒಂದು ಫ್ಲ್ಯಾಟ್ (2002ರಲ್ಲಿ 1.3 ಲಕ್ಷ ರೂ.ಗಳಿಗೆ ಖರೀದಿ)
- ಜಂಟಿ ಮಾಲೀಕತ್ವದಲ್ಲಿ ಮೂರು ಆಸ್ತಿ.
- 2,47,208 ರೂಪಾಯಿ ಭೂಮಿ.
- ಚಿನ್ನಾಭರಣ: 1.48 ಲಕ್ಷ ರೂಪಾಯಿ
- ಚರಾಸ್ತಿ: 1.97 ಕೋಟಿ ರೂಪಾಯಿ.
- ಖಾಸಗಿ ವಾಹನ ಇಲ್ಲ.
- ಯಾವುದೇ ಸಾಲ ಇಲ್ಲ