ಬೆಂಗಳೂರು: ಗೊಬ್ಬರ ಮಾಫಿಯಾ ವಿರುದ್ದ ಸಮರ ಸಾರಿರುವ ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ದೊಡ್ಡಬಳ್ಳಾಪುರದಲ್ಲಿ ಭರ್ಜರಿ ಕಾರ್ಯಾಚರಣೆ ಕೈಗೊಂಡರು.
ಗುರುವಾರ ಇಡೀ ದಿನ ದಾಳಿ ನಡೆಸಿದ ಕೃಷಿ ಜಾಗೃತಕೋಶದ ಅಧಿಕಾರಿಗಳು, ದೊಡ್ಡಬಳ್ಳಾಪುರದ ಪ್ರಗತಿ ಆರ್ಗ್ಯಾನಿಕ್ಸ್ ಕೇಂದ್ರದ ಮೇಲೆ ದಾಳಿ ಕೈಗೊಂಡರು.
ಅನಧಿಕೃತ ಜೈವಿಕ ಕೀಟನಾಶಕ ಹಾಗೂ ಜೈವಿಕ ಗೊಬ್ಬರ ಪೋಷಕಾಂಶ ತಯಾರಿಸಿದ್ದ ಆರೋಪ ಪ್ರಗತಿ ಆರ್ಗ್ಯಾನಿಕ್ ವಿರುದ್ದ ಕೇಳಿಬಂದಿದೆ. ಈ ಬಗ್ಗೆ ಮಾಹಿತಿ ಕಳೆಹಾಕಿದ ಅಧಿಕಾರಿಗಳು, ಸುಮಾರು 5ಲಕ್ಷ ರೂ.ಮೌಲ್ಯದ ಜೈವಿಕ ಕೀಟನಾಶಕ ಮತ್ತು ಜೈವಿಕ ಗೊಬ್ಬರ ಸೂಕ್ಷ್ಮ ಪೋಷಕಾಂಶ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಹಾಗೂ ದೊಡ್ಡಬಳ್ಳಾಪುರ ಎಡಿಎ ಸುಶೀಲಮ್ಮ ಹಾಗೂ ವಿಚಕ್ಷಣಾದಳದ ಎಡಿಎ ಪ್ರಮೋದ್ ಈ ದಾಳಿ ನಡೆಸಿದರು.