📝 ಪ್ರಸಾದ್ ಪಿ ಬೈಂದೂರ್
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…? ನನ್ನ ಭಾರತದಲ್ಲಿ ದೇಶಕ್ಕೆ ಒಬ್ಬ ಅಲ್ಲ, ಜಿಲ್ಲೆಗೊಬ್ಬ ನೀರಜ್ ಚೋಪ್ರ ಸಿಗುತ್ತಾರೆ. ಹೇಗೆ ಗೊತ್ತಾ..?
ಒಂದು ಚಿನ್ನ ಗೆದ್ದವರಿಗೆ ನೂರು ತಲೆ ಮಾರಿಗಾಗುವಷ್ಟು ಸುರಿಯುವುದಕ್ಕಿಂತ ನೂರು ಚಿನ್ನ ಗೆಲ್ಲಲು ನೂರು ಬಡ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ವೆಚ್ಚ ಸಂಪೂರ್ಣ ಸರ್ಕಾರಗಳು ಬರಿಸಿದರೆ ದೇಶಕ್ಕೆ ಹೆಚ್ಚು ಲಾಭವಾಗುತ್ತದೆ ಮತ್ತು ಅತೀ ಹೆಚ್ಚು ಚಿನ್ನ ಗೆಲ್ಲುವ ದೇಶವೂ ನಮ್ಮದಾಗುತ್ತದೆ ಎನ್ನುವುದು ಅಭಿಪ್ರಾಯ.
ಖುಷಿಯ ಜೊತೆಗೆ ಹೆಮ್ಮೆಯೂ ಕೂಡ..
ನಮಗೆ ಗೊತ್ತಿಲ್ಲದಂತೆ ಅದೆಷ್ಟೋ ಸಾವಿರ ಮಂದಿ ನೀರಜ್ ಚೋಪ್ರರಂತವರು ಹಣ ಎಂಬ ಬಲೆಯ ಮಧ್ಯೆ ಸಿಲುಕಿ ಚಿನ್ನದ ಪ್ರತಿಭೆಯನ್ನು ಒಳಗೆ ಇಟ್ಟುಕೊಂಡು ಹೊರಗೆ ಹಾಕಲಾಗದೆ ಬಲೆಯನ್ನೇ ಹರಿದು ಹಿಂತಿರುಗಿದವರಿದ್ದಾರೆ.
ಪ್ರತಿಭಾನ್ವಿತ ಬಡ ಕ್ರೀಡಾ ಪಟುಗಳಿಗೆ ಹಳ್ಳಿಗಳಲ್ಲಿರುವ ಚಾಣಾಕ್ಷ ಕ್ರೀಡಾಪಟುಗಳನ್ನು ಗುರುತಿಸಿ ಸಾಧನೆ ಮಾಡುವಂತವರಿಗೆ ಎಲ್ಲಾ ಉಚಿತ ಸೌಲಭ್ಯ, ಆರ್ಥಿಕ ವ್ಯವಸ್ಥ, ಪ್ರೋತ್ಸಾಹವು ಸರ್ಕಾರದಿಂದ ಸಿಗುವಂತಾದರೆ, ದೇಶಕ್ಕೆ ಒಬ್ಬ ಅಲ್ಲ ಜಿಲ್ಲೆಗೆ ಒಬ್ಬ ನೀರಜ್ ಚೋಪ್ರ ರಂತವರು ಸಿಗುತ್ತಾರೆ. ಅಷ್ಟೇ ಅಲ್ಲ, ವರ್ಷಕ್ಕೆ 50 ಚಿನ್ನವೂ ಭಾರತದ ಪಾಲಾಗುತ್ತಿರುತ್ತದೆ.