ಗದಗ: ಕೊರೋನಾ ಸೋಂಕು ಇತ್ತೀಚಿಗೆ ಗಂಭೀರ ಸ್ವರೂಪ ಪಡೆದಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರಾಜಕೀಯ ಆಟಾಟೋಪ ಮಾಡದೆ ಆಡಳಿತದ ಬಗ್ಗೆ ಗಮನ ಹರಿಸಬೇಕೆಂದು ಗದಗದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಎಚ್.ಕೆ.ಪಾಟೀಲ ಹೇಳಿದ್ದಾರೆ.
ತಜ್ಞರು ಸಹ ಬಹಳ ಕಳವಳಕಾರಿ ಸಂಗತಿಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಹಲವು ರಾಜ್ಯಗಳಲ್ಲಿ ಕೊರೊನಾ ಗಂಭೀರತೆ ಕಂಡು ಬರುತ್ತಿರುವ ಸಂದರ್ಭದಲ್ಲಿ ಸರಕಾರ ಕೊರೊನಾ ನಿಯಂತ್ರಣ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಅದನ್ನು ಬಿಟ್ಟು ಎಂಟಿಬಿ ನಾಗರಾಜ್ ಹಾಗೂ ಆನಂದಸಿಂಗ್ ಸೇರಿದಂತೆ ಕೆಲವು ಮಂತ್ರಿಗಳು ಮುಖ್ಯಮಂತ್ರಿಗಳಿಗೆ ಗಡುವು ಕೊಟ್ಟಿದ್ದಾರೆ. ಸುಮಾರು ಐದು ಜನ ಶಾಸಕರು ಖಾತೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದಾರೆ. ಮುಖ್ಯಮಂತ್ರಿಗಳು ಸಹ ಮತ್ತೆ ದೆಹಲಿಗೆ ಹೋಗಿ ಖಾತೆ ಬಗ್ಗೆ ಶಮನ ಮಾಡುವದರಲ್ಲಿ ನಿರತರಾಗಿರುವುದು ಸರಿಯಲ್ಲ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ವಿಚಾರ ಬಗ್ಗೆ ಪ್ರತಿಕ್ರಿಸಿದ ಅವರು, ಟ್ವೀಟ್ ನೋಡಿ ಆಶ್ಚರ್ಯ ಹಾಗೂ ನೋವು ಆಗಿದೆ. ಮಾಜಿ ಆಫೀಸರ್ ಮೆಕೇದಾಟು ನಿಲುವಿಗೆ ಬೆಂಬಲಿಸಿದ್ದಾರೆ. ಸಿಟಿ ರವಿಯವರ ನಿಲುವು ಅಸಮರ್ಪಕವಾಗಿದೆ. ರಾಜ್ಯದ ನಿಲುವು ಒಂದೇ ಆದರೆ ಸಿಟಿ ರವಿಯವರು ಗೊಂದಲ ಸೃಷ್ಟಿಸಿದೆ. ಬಿಜೆಪಿ ತನ್ನ ನಿಲುವನ್ನ ಸ್ಪಷ್ಟ ಪಡಿಸಬೇಕು. ಸಿಟಿ ರವಿ ನಿಲುವು ಏನೆಂಬುದನ್ನ ಸ್ಟಷ್ಟ ಪಡಿಸಬೇಕು ಎಂದರು.
ಅಷ್ಟೇ ಅಲ್ದೇ ಕೇಂದ್ರ ಸರಕಾರ ಐಟಿಯನ್ನ ದುರ್ಬಳಕೆ ಮಾಡಿಕೊಂಡಿದೆ. ಹೀಗಾಗಿ ಕೇಂದ್ರ ಸರಕಾರದ ಮೇಲೆ ವಿಶ್ವಾಸಾರ್ಹತೆ ಕಡಿಮೆ ಆಗಿದೆ. ತಮಗೆ ಬೇಕಾದ ಸಮಯದಲ್ಲಿ ವಿರೋಧ ಪಕ್ಷದ ಮೇಲೆ ಐಟಿ ದುರ್ಬಳಕೆ ಮಾಡಿಕೊಂಡು ಬರುತ್ತಿದೆ. ಆದರೆ ಸ್ವ ಪಕ್ಷದವರ ಮೇಲೆ ಯಾಕೆ..? ಐಟಿ ರೆಡ್ ಮಾಡಲಾಗುತ್ತಿಲ್ಲ. ಜತಗೆ ದಾಳಿ ಮಾಡಿದ ಸಂದರ್ಭದಲ್ಲಿ ವಶ ಪಡಿಸಿಕೊಂಡು ಹಣ ಸೇರಿದಂತೆ ಇನ್ನಿತರ ವಸ್ತುಗಳ ಲೆಕ್ಕವನ್ನು ನೀಡಬೇಕು ಎಂದರು.
ರಾಜೀವ ಗಾಂಧಿ ಖೇಲ್ ರತ್ನ ಹೆಸರು ಬದಲವಣೆ ಮಾಡಿರುವ ಪ್ರಧಾನಿ ಮೋದಿ ರಾಜಕೀಯ ದುರುದ್ದೇಶಪೂರಿತವಾಗಿದೆ. ಧ್ಯಾನ್ ಚಂದ್ ಹೆಸರಲ್ಲಿ ಖೇಲ್ ವಜ್ರ ಅಂತಾ ಮಾಡೊದರೂ ಅಪೇಕ್ಷೆ ಇಲ್ಲ. ಇದು ಕ್ರೀಡಾ ಕ್ಷೇತ್ರಕ್ಕೆ ಮಾಡಿದ ಅವಮಾನ ಮಾಡಿದ್ದಾರೆ. ಈಗಾಗಲೇ ದ್ಯಾನ್ ಚೆಂದ್ ಹೆಸರಲ್ಲಿ ಅವಾರ್ಡ್ ಇದೆ ಎಂದು ಶಾಸಕ ಎಚ್ ಕೆ ಪಾಟೀಲರು ಆಕ್ಷೆಪ ವ್ಯಕ್ತಪಡಿಸಿದರು..