ರಾಜ್ಯದಲ್ಲೀಗ ದೇಗುಲ ಧ್ವಂಸ ವಿಚಾರ ವಿವಾದದ ಬಿರುಗಾಳಿ ಎಬ್ಬಿಸಿದೆ. ದೇಗುಗಳ ರಕ್ಷಣೆ, ಪುನರ್‌ನಿರ್ಮಾಣ ವಿಚಾರಗಳ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವುದು ಅಚ್ಚರಿ.
ಈ ಕುರಿತಂತೆ ‘ವಿಜಯ ಟೈಮ್ಸ್’ ಮಾಡಿರುವ ವರದಿಯೊಂದು ದೇಗುಲ ಧ್ವಂಸದ ಕರಾಳ ಕಥೆಯನ್ನು ಅನಾವರಣ ಮಾಡಿದೆ. ಸರ್ಕಾರವು ಸದ್ದಿಲ್ಲದೆಯೇ ಸಾವಿರಕ್ಕೂ ಹೆಚ್ಚು ದೇಗುಲಗಳನ್ನು ಧ್ವಂಸ ಮಾಡಿದೆ ಎಂದು ಪತ್ರಕರ್ತೆವಿಜಯಲಕ್ಷ್ಮಿ ಶಿಬರೂರು ಅನಾವರಣ ಮಾಡಿದ್ದಾರೆ.