ಬೆಂಗಳೂರು: ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆಸುಮಾರು 4.75 ಲಕ್ಷ ರೂ ಹಣವನ್ನು ಹಿಂದಿರುಗಿಸುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿರುವ ಬೆಳವಣಿಗೆ ರಾಜಕೀಯ ನಾಯಕರ ಜಟಾಪಟಿಗೆ ಕಾರಣವಾಗಿದೆ.
ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಹಿರೇಮಗಳೂರು ಕಣ್ಣನ್ ಅವರಿಗೆ ನೋಟಿಸ್ ನೀಡಿರುವುದು ತಹಶೀಲ್ದಾರರ ತಪ್ಪು ಎಂದಿದ್ದಾರೆ. ನೋಟೀಸ್ ನೀಡಿರುವ ತಹಸೀಲ್ದಾರರೇ ಹಣ ಪಾವತಿಸಬೇಕೆಂದು ನೋಟಿಸ್ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಸ್ಥಳಿಯ ತಹಶೀಲ್ದಾರ್ 90 ಸಾವಿರ ಹಣ ಪಾವತಿಸಿ ಸಮಸ್ಯೆ ಸೃಷ್ಟಿಸಿದ್ದಾರೆ. ಇಂತಹಾ ಸಮಸ್ಯೆ ಬೇರೆ ಯಾವುದೇ ಮುಜರಾಯಿ ದೇಗುಲದಲ್ಲಿ ಆಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.






















































