ವಾಷಿಂಗ್ಟನ್: ಮಂಗಳನ ಅಂಗಳಕ್ಕೆ ಜಿಗಿಯುವ ಪ್ರಯತ್ನದಲ್ಲಿ ನಾಸಾ ಯಶಸ್ವಿಯಾಗಿದೆ. ನಾಸಾದ ಮಹತ್ವಾಕಾಂಶೆಯ ಈ ಯೋಜನೆ ಫಲಪ್ರದದ ಹಿಂದಿರುವ ಶಕ್ತಿಯೇ ‘ಕನ್ನಡತಿ’.
ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿದ್ದು, ಇದರಲ್ಲಿ ಪ್ರಮುಖ ಪಾತ್ರವಹಿಸಿರುವ ಭಾರತ ಮೂಲದ ಡಾ.ಸ್ವಾತಿ ಮೋಹನ್ ಅವರಿಗೆ ಅಭಿನಂದನೆಗಳ ಹೂಮಳೆಯಾಗುತ್ತಿದೆ ಇವರು ಮೂಲತಃ ಕನ್ನಡಿಗರು ಎಂಬುದು ಕರುನಾಡಿಗೆ ಹೆಮ್ಮೆಯ ಸಂಗತಿ.
ಅಮೇರಿಕಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಕನ್ನಡಿಗರಾದ ಜ್ಯೋತಿ ಹಾಗೂ ಮೋಹನ್ ದಂಪತಿಗಳ ಪುತ್ರಿ, ಡಾ.ಸ್ವಾತಿ ಮೋಹನ್. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ನಿಯಂತ್ರಣ ಕೊಠಡಿಯಲ್ಲಿ ಗೈಡೆನ್ಸ್ ಆ್ಯಂಡ್ ನೇವಿಗೇಶನ್ ಹಾಗೂ ಕಂಟ್ರೋಲ್ ಯೋಜನೆಯ ತಂಡದ ತಜ್ಞರ ಸಹಕಾರದೊಂದಿಗೆ ಇವರು ರೋವರನ್ನು ಮಂಗಳನ ಅಂಗಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿರುವ ಡಾ.ಸ್ವಾತಿ ಮೋಹನ್, ಏರೋನಾಟಿಕ್ಸ್ ಎಂಐಟಿಯಿಂದ ಎಂಎಸ್ ಮತ್ತು ಪಿಎಚ್’ಡಿ ಪಡೆದಿದರೆ.
ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ ವಿಜ್ಞಾನಿಗಳ ಜೊತೆ ಸಂಶೋಧನೆ ನಡೆಸುತ್ತಾ,ಈ ಸ್ವಾತಿ ರೋವರ್ ಮಿಷನ್ ನ ವಿಜ್ಞಾನಿಗಳ ತಂಡಕ್ಕೆ ಸೇರ್ಪಡೆಗೊಂಡು ಇದೀಗ ಮಂಗಳ ಯಾತ್ರೆ ಮೂಲಕ ವಿಶ್ವಖ್ಯಾತಿಗೊಳಗಾಗಿದ್ದಾರೆ.
ಈ ನಡುವೆ, ಮಂಗಳನ ಅಂಗಳದಲ್ಲಿ ನಾಸಾದ ಮಹತ್ವಾಕಾಂಕ್ಷೆಯ ಪರ್ಸಿವರೆನ್ಸ್ ರೋವರ್ ಮಿಷನ್’ನ್ನು ಯಶಸ್ವಿಯಾಗಿ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತ ಮೂಲದ ಅಮೇರಿಕಾದ ನಾಸಾದ ಇಂಜಿನಿಯರ್ ಡಾ. ಸ್ವಾತಿ ಮೋಹನ್, ಅವರನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅಭಿನಂದಿಸಿದ್ದಾರೆ.